Chania

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕಪ್ರೊ.ಜಿ.ಎಚ್. ಹನ್ನೆರಡುಮಠ

ಹೌದು... ನೋಟಕ್ಕೆ ಅಮೇರಿಕ ! ಊಟಕ್ಕೆ ಕರ್ನಾಟಕ!
ವಿಶ್ವಾ ನನ್ನ ತಾಟಿಗೆ ಕಡುಗೆಂಪು ಬಣ್ಣದ ಹಣ್ಣು ಹಚ್ಚಿದ.
"ಇದು ಯಾವ ಹಣ್ಣು?" ಅಂತ ಕೇಳಿದೆ.
ಆತ ಹೇಳಿದ-"ಇದು ಹಣ್ಣು ಅಲ್ಲ ಮೂಲಂಗಿ...”

    ಕೆಂಪು-ಬಿಳಿ-ನೀಲಿ ಬಣ್ಣದ ಮೂಲಂಗಿಗಳನ್ನು ಬರ್ಕಲಿ ಮಾಲ್ನಲ್ಲಿ ನೋಡುವದೇ ಖುಶಿ. ಅಮೇರಿಕೆಯ ಮೂಲಂಗಿಗಳು ಕರ್ನಾಟಕದ ಎರಿಹೊಲದ ಮೂಲಂಗಿಗಳಂತೆ ಖಡಕು-ಖಾರ ಅಲ್ಲ; ಸಪ್ಪಟ ಸಾರು!
    ಹಾಂ! ಉಳ್ಳಾಗಡ್ಡಿಯೂ ಅಷ್ಟೇ. ಒಂದೊಂದು ಉಳ್ಳಾಗಡ್ಡಿ ಡುಂಡುಂ-ಢುಮಿಕ್ಯಾ ಆಗಿರುತ್ತವೆ. ನೋಡಲು ಮನೋಹರ ರೂಪ. ಆದರೆ ಉಳ್ಳಾಗಡ್ಡಿಗಳೂ ಗದಗ ಜಿಲ್ಲೆಯ ಉಳ್ಳಾಗಡ್ಡಿಗಳಂತೆ ಖಾರ ಅಲ್ಲ. ಅದನ್ನೇ ಪಲ್ಲೆ ಮಾಡಿ ತಿಂದರೂ ಖಾರ ಹತ್ತುವದಿಲ್ಲ.
    ಶೈಲಾ ಬರ್ಕ್ಲಿ ಮಾರ್ಕೇಟ್ ಮಾಲ್ನಲ್ಲಿ ಒಂದೇಒಂದು ದೆವ್ವನ ಮೊಮ್ಮಗಳಂಥಾ ಬದ್ನಿಕಾಯಿ ಕೊಂಡಳು. ರೇಟುಮಾತ್ರ ಒಂದೇಒಂದು ಬದ್ನಿಕಾಯಿಗೆ ನಮ್ಮ ರೂಪಾಯಿ ಲೆಕ್ಕದಲ್ಲಿ ೨೦೦ ರೂಪಾಯಿ. ಜೊತೆಗೆ; ಅರ್ಧಕಿಲೊ ಎಳೇ ಮದರಂಗಿಯಾದ ಬೆಂಡಿಕಾಯಿ ಕೊಂಡಳು. ಅರ್ಧಕಿಲೊಕ್ಕ ೫೦೦ ರೂಪಾಯಿ. ಬೆಂಡಿಕಾಯಿ ಬಾಯಾಡಿಸಿಕೊಳ್ಳಲು ತುಂಬ ಸವಿ. ಬದ್ನಿಕಾಯಿ ಪಲ್ಲೆ ಗಿಂಜೂ ಅಲ್ಲ; ನಂಜೂ ಅಲ್ಲ. ಅದಕ್ಕೆ ಮೇಲೆ ಶೇಂಗಾಹಿಂಡಿ ಕಲಸಿಕೊಂಡು ಧುಮಶ್ಯಾನ ತಿಂದೆವು.
    ಅಮೇರಿಕೆಯ ಯಾರ ಮನೆಯಲ್ಲೂ ಸಾರು-ಕಾಯಿಪಲ್ಲೆ-ಬೋಂಡಾ-ವಡಾ ತಿಂದರೂ ಅವು ನಮ್ಮ ಬಿಳಿಜೋಳ ರೊಟ್ಟಿಯಷ್ಟು ಸುಖ ಕೊಡಲಾರವು. ಹಸಿಮೆಣಸಿನಕಾಯಿ... ಇದರಲ್ಲಿ ಕೆಂಪು- ಹಳದಿ- ಬಿಳೆ- ಹಸಿರು ನೀಲಿ ಬಣ್ಣದ ಮೆಣಸಿನಕಾಯಿಗಳು. ಅಮೇರಿಕೆಯ ರೈತನಿಗೆ ಇದರಲ್ಲಿ ಹೆಚ್ಚು ಖಾರ ಇರುವ ಮಣಸಿನಕಾಯಿ[ಸ್ಪಾಯ್ಸಿ ಚಿಲ್ಲಿ] ಕೊಡಲು ಹೇಳಿದೆವು. ಆತ ಬಾಯ್ತುಂಬ ಶಬ್ಬ ತುಂಬಿ ಇದು "ಸ್ಪೆಸೀ ಚಿಲ್ಲಿ" ಅಂತ ಕೊಟ್ಟ. ಸಂಜೆ ಕೇವಲ ಒಂದು ಮೆಣಸಿನಕಾಯಿ ಪಲ್ಲೆಗೆ ಹಾಕಿದಳು. ಚಿಲಿ ನಮ್ಮ ಇಲಿಯಂತೆಯೇ ಇತ್ತು! ಖಾರವೂ ಇಲ್ಲ ಕಂಗಾಲೂ ಇಲ್ಲ. ನಮ್ಮ ಬ್ಯಾಡಗಿ ಮೆಣಸಿನ ಕಾಯಿಯ ಮುಂದೆ ಪುಟ್ಟ ಮರಿಗುಬ್ಬಿ. ಇಲ್ಲಿಯ ತರಕಾರಿಗಳು ರೂಪದಲ್ಲಿ ಸುಂದರ, ಸ್ವರೂಪದಲ್ಲಿ ಸಪ್ಪೆ.
    ಅಮೇರಿಕೆಯವರು ಭಾರತೀಯರನ್ನು ಕಂಡರೆ ತಲೆಯಿಂದ ಪಾದದವರೆಗೆ ನಡುಗುತ್ತಾರೆ. ನಾವು ಮಾಡಿಕೊಟ್ಟ ಮಿರ್ಚೀ ತಿಂದು ಅಮೇರಿಕೆಯ ಗೆಳೆಯ ಮುಗಿಲು ಹಾರುವಂತೆ ಕೂಗಿಬಿಟ್ಟ. ನಮ್ಮನ್ನು ಅವರು "ಸ್ಪೆöÊಸೀ ಈರ್ಸ್" ಅನ್ನುತ್ತಾರೆ. ನಮ್ಮದು ಹಸೀಖಾರ, ಸಾಂಬಾರ ದಿನಸಿ, ಮಸಾಲಿ ಪುಡಿ, ಉಳ್ಳಾಗಡ್ಡಿ, ಬಳ್ಳೊಳ್ಳಿ, ಡಬ್ಬಿಗಟ್ಟಲೇ ಎಣ್ಣಿ ಸುರುವಿ ಮಾಡುವ ಅಡಿಗಿ: ಅದು ಅವರಿಗೆ ಮಸಾಲಿಯ ಬಾಂಬ್ ಇದ್ದಂತೆ. ನಮ್ಮಲ್ಲಿ ಅಡಿಗಿಯಲ್ಲಿ ನಾವು ರುಚಿನೋಡುತ್ತೆÃವೆ, ಅವರು ಅಡಗಿಯಲ್ಲಿ ರುಚಿ ನೋಡುವದಿಲ್ಲ; ಕ್ಯಾಲರಿ- ತಾಕತ್ತು- ನಿಯತ್ತು ನೋಡುತ್ತಾರೆ. ಹೀಗಾಗಿ ನಮ್ಮ ಹೋಳ್ಗಿ- ಹುಗ್ಗಿ- ಉಂಡಿ- ಮಿರ್ಚೀ ಅಂದರೆ ಅವರು "ಬಿಗ್ ವೇಸ್ಟ" ಅಂತ ಥರಗುಟ್ಟಿ ನಡುಗುತ್ತಾರೆ!

ಊಟ ಬಲ್ಲವರು ನಾವು; ಆಟ ಬಲ್ಲವರು ಅವರು!
    ಮುಖ್ಯವಾಗಿ ಅವರು ಕಾಯಿಪಲ್ಲೆಗಳಲ್ಲಿ ಬ್ರಾಕ್ಲಿ, ಬಟರ್ ನಟ್ [ಕುಂಬಳಕಾಯಿ ತರಹ], ಜವಾಕಿನಿ, ಎಗ್ ಪ್ಲಾಂಟ್[ಬದ್ನಿಕಾಯಿ], ಅಸ್ಪಾರೆಗಸ್, ್ಯಾಡಿಶ್, ಹಾಲಪ್ಪೆನೊ [ಮೆಣಸಿನಕಾಯಿ], ಸೆರಾನೊ [ಇನ್ನೊಂದು ಮೆಣಸಿನ ಕಾಯಿ]: ಹಾಗೂ ಸೊಪ್ಪಿನ ಪಲ್ಲೆಯಲ್ಲಿ ಸ್ಟಿಸ್ಚರ್ಡ, ಬೇಲ್, ಸ್ಪಿನೆಚ್, ಸ್ಪಿçಂಗ್ ಆನಿಯನ್ [ತಪ್ಪಲ ಉಳ್ಳಾಗಡ್ಡಿ ತರಹ], ಕರ್ಡ್ ಗ್ರಿನ್, ಮಸ್ರ್ಡ್ ಗ್ರಿನ್, ಬಾಕ್ಚಾಯ್ ಸೇವಿಸುತ್ತಾರೆ; ಮತ್ತು ಧಾನ್ಯಗಳಲ್ಲಿ ಟೀಜ್, ಕರ್ನ, ಪಾವಾಬೀನ್, ಬ್ಲಾಕ್ಸ್ಆಯ್ಡ ಪೀಜ್ [ದಪ್ಪ ಅಲಸಂದಿ], ಹಾಗೂ ಬೆಲ್ಸೆಫೆರಿ[ಡೊಣ್ಣಮೆಣಸಿನ ಕಾಯಿ], ಸ್ಯಾಲರಿ [ದಂಟಿನ ಪಲ್ಲೆ] ಇಷ್ಟ ಪಡುತ್ತಾರೆ. ಚಪಾತಿ-ಅನ್ನ-ರೊಟ್ಟಿ ಅವರಿಗೆ ನಷ್ಟ. ಅಮೇರಿಕೆಯವರು ಅನ್ನ ಉಣ್ಣುವದೇ ಇಲ್ಲ. ಫಾಸ್ಟಫುಡ್ ಅವರ ಅವಸರದ ಕೂಳಿಗೆ ಅನಿವಾರ್ಯ. ಕಾರಣ ಬ್ರೆಡ್ಡು, ಪಾಸ್ತಾ, ಬ್ರಾಕಲೀ, ನ್ಯೂಡಲ್ಸ, ಸ್ಟೂ ಇವನ್ನು ಕುದಿಸಿ, ಮೇಲೆ ಕುಚ್ಚಿದ ಪಚಡಿ ಸುರುವಿ, ಕುಚುಕುಚು ತಿಂದರೆ ಮುಗೀತು. ಮೇಲೆ ಫ್ಯಾಕ್ಟರಿಯಲ್ಲಿ ಪ್ರೊಸೆಸ್ ಆಗಿ ಬಂದ ಅಂಟಿನಂತ ಜ್ಯೂಸ್ ಹಾಕಿ ತಿಂದು, ಅದನ್ನೆÃ ಬುತ್ತಿಕಟ್ಟಿಕೊಂಡು; ಅಫೀಸಿಗೆ ಓಡುತ್ತಾರೆ
    ನಮಗೆ ಊಟ ಅಂದರೆ ಜೀವಬ್ರಹ್ಮನ ಸತ್ಯ! ಅವರಿಗೆ ಊಟ ಅಂದರೆ ಅನ್ನಬ್ರಹ್ಮನ ಮಿಥ್ಯ!
    ನಮಗೆ ವೆಗ್ಗಳ ಊಟ ಶಿವನ ಸುಖ; ಅವರಿಗೆ ಬಗ್ಗಳ ಊಟ ಸಾವಿನ ಮುಖ!
    ಯಾವತ್ತೂ ಕುಂತಾಗ-ನಿಂತಾಗ-ಮಲಗಿದಾಗ ಹಣ್ಣಿನ ರಸ ಕುಡಿಯುವದು ಅವರ ಜೀವನ ಶೈಲಿ. ಹಣ್ಣಿನ ರಸ ನಮ್ಮಂತೆ ಸೀಕರಣಿ ಅಲ್ಲ; ಅವೂ ಫ್ಯಾಕ್ಟರಿಯಲ್ಲಿ ಪ್ರೊಸೆಸ್ ಆಗಿ ಬಂದ ಸಾವಿರಾರು ತರದ ಡಬ್ಬಿಗಳು. ಒಬ್ಬಳು ಲಲನೆ ದಾರಿಯಲ್ಲಿ ಓಡುತ್ತ ಬಂದು, ಒಂದು ಡಬ್ಬಿ ಎತ್ತಿ ಖಾಲಿ ಮಾಡಿ; ಅದನ್ನು ಕಸದ ಡಬ್ಬಿಗೆ ಎಸೆದು ಓಟ ಮುಂದುವರೆಸುತ್ತಾಳೆ. ಓಡುವದೇ ಅವರ ಜೀವನಶೈಲಿ. ನೋಡುವದೇ ನಮ್ಮ ಶೈಲಿ. ಒಂದರ್ಥದಲ್ಲಿ ಅಮೇರಿಕೆಯವರ ಹೊಟ್ಟೆ ಅಂದರೆ ಲಕ್ಷಕೋಟಿ ಫ್ಯಾಕ್ಟರಿ ಪ್ರಾಡಕ್ಟ್ಗಳ ಅತಿದೊಡ್ಡ ಕಸದ ಗುಂಡಿ. ಕಾರಣಕ್ಕಾಗಿಯೋ ಏನೋ ಅವರು ಹಣ್ಣಿನ ಮರದಿಂದ ಹಣ್ಣು ನೇರವಾಗಿ ಕಿತ್ತು ತಿನ್ನುವದೇಇಲ್ಲ. ಕರ್ನಾಟಕದಲ್ಲಿ ನನಗೆ ನನ್ನ ಗೆಳೆಯರು "ಹುಗ್ಗಿ ಜಂಗಮ" ಅಂತ ವರ್ಣನೆ ಮಾಡುತ್ತಾರೆ
   ಅಮೇರಿಕೆಯಲ್ಲಿ ಯಾರಿಗಾದರೂ "ನೀ ಹೆಲ್ದಿ ಆಗಿ ದಪ್ಪಗಿದ್ದಿಯಾ" ಅಂತ ವರ್ಣನಾ ಮಾಡಿ ನೋಡಿರಿ. ಅವರು ಕ್ಷಣದಿಂದಲೇ ತಮ್ಮ ಆಹಾರ ಪದ್ಧತಿಯಲ್ಲಿ ಐವತ್ತು ಪರ್ಸೆಂಟು ಕಮ್ಮಿ ಮಾಡಿ, ಖಾಲಿ ಹೊಟ್ಟೆಯಲ್ಲಿ ಓಡತೊಡಗುತ್ತಾರೆ. ಕಾರಣ ಅವರು ಉಣ್ಣುವದು ಕರಗಿಸುವದಕ್ಕಾಗಿ; ನಾವು ಕರ್ನಾಟಕದವರು ಉಣ್ಣುವದು ಉಣ್ಣುತ್ತಲೇ ಕರಗಿಹೋಗುವ ಸಲುವಾಗಿ. ನಮಗೆ ಊಟವೇ ಸತ್ಯದ ಪರಮ ಗುರಿ, ಊಟವೇ ಸಾಕ್ಷಾತ್ಕಾರ! ಆದ್ದರಿಂದ ನಮ್ಮ ದೇವತೆಗಳೆಲ್ಲಾ ಭೋಜನಪ್ರಿಯರು. ಪಾರ್ವತಿಗೆ ಹೋಳಿಗೆ, ಲಕ್ಷಿö್ಮಗೆ ಸಿರಾ, ಗಣಪತಿಗೆ ಗುದಗನ ಹುಗ್ಗಿ, ಸರಸ್ವತಿಗೆ ಫೇಡೆ, ಗೌರಿಗೆ ಗೋದಿಹುಗ್ಗಿ ಬೇಕೇಬೇಕು. ರೊಟ್ಟಿ ತಿನ್ನುವ ದೇವರು ನಮ್ಮಲ್ಲಿ ಒಬ್ಬರೂ ಇಲ್ಲ! ನಮ್ಮ ಊಟದ ಪಂಚಪಕ್ವಾನ್ನಗಳ ಸುಖ ಅಮೇರಿಕೆಯವರಿಗೆ ಈರೇಳು ಜನ್ಮಕ್ಕೂ ಇಲ್ಲ
    ಹೌದು! ನಾವು ತಿನ್ನುವ ಹುಂಚೀಕಾಯಿ ಚಟ್ನಿ, ಮಾವಿನಕಾಯಿ ಉಪ್ಪಿನಕಾಯಿ, ಕವಳಿಕಾಯಿ ಚಟ್ನಿ, ನೆಲ್ಲಿಕಾಯಿ ಉಪ್ಪಿನಕಾಯಿ, ಎಣಗಾಯಿ, ಅಗಸೀಹಿಂಡಿ ಹಸೀಖಾರ ಕಲಿಸಿಟ್ಟ ಕರಿಂಡಿ, ಮಿರ್ಚಿಭಜಿ ಇವು ಅಮೇರಿಕೆಯ ಪ್ರೆಸಿಡೆಂಟ್ಗೂ ದೊರೆಯಲಾರವು!

ಕರ್ನಾಟಕ ಊಟಕ್ಕೆ ಚಂದ! ಅಮೇರಿಕ ನೋಟಕ್ಕೆ ಅಂದ!
    ಹಾಂ ! ಹೌದು....
    ಕನ್ನಡದ ರೈತ ಜಗತ್ತಿನಲ್ಲೆ ರಸವಂತ: ರುಚಿವಂತ
    ಅಮೇರಿಕೆಯ ಬರ್ಕ್ಲಿ ಚೌಕದ ಶನಿವಾರ ಸಂತಿಗೆ [ಸ್ಯಾಟರ್ ಡೇ ಮಾರ್ಕೇಟ್] ನೂರಾರು ರೈತರು ಡಬಲ್ ಡೆಕ್ಕರ್ ಕಾರುಗಳಲ್ಲಿ ಕಾಯಿಪಲ್ಲೆ-ಸೊಪ್ಪಿನ ಪಲ್ಲೆ ಮಾರಲು ಬಂದಿದ್ದರು. ನಮ್ಮ ರೈತ ಮಣಭಾರ ಹೊತ್ತರೂ ಹೊಟ್ಟೆಗೆ ಹಿಟ್ಟಿಲ್ಲ; ರಟ್ಟೆಗೆ ರೆಸ್ಟಿಲ್ಲ. ಅಮೇರಿಕೆಯ ರೈತ ಅರಮನೆಯ ಮೊಮ್ಮಗ ಇದ್ದಂತೆ. ಅಲ್ಲಿ ರೈತರೇ ಕಟ್ಟಿಕೊಂಡ ಅಸೋಸಿಯೆಶನ್ನುಗಳು ಹೇಳಿದಂತೆ ಸರಕಾರಗಳು ಕೇಳುತ್ತವೆ. ಒಬ್ಬಳು ರೈತ ಚಲುವೆಯ ಜೊತೆಗೆ ನಾನು ಇಂಟರ್ವ್ಯೂ ಮಾಡುತ್ತ ಕೇಳಿದೆ- "ನಿಮಗೆ ಸರಕಾರದಿಂದ ಏನು ಹೆಲ್ಪ್ ಇದೆ?" ಅವಳು ಹೇಳಿದಳು... "ನಮಗೂ ಸರಕಾರಕ್ಕೂ ಸಂಬಂಧ ಇಲ್ಲ. ನಮ್ಮ ರೈತ ಸಂಘಗಳು ಕೈಕೊಂಡ ನಿರ್ಣಯವೇ ಅಂತಿಮ... ಇದರಲ್ಲಿ ಸರಕಾರದ ಕೆಲಸವಿಲ್ಲ." 
    ನಿಜ. ರೈತರು ಬೆಳೆದ ಬೆಳೆಗೆ ರೇಟು ಕಟ್ಟುವವರೂ ಅವರೇ. ಅದರಲ್ಲಿ ಮೋಸ ಇಲ್ಲ; ತಗಲು- ದಗಲ್ Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought