Chania

ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ
ಇಂತಹದಾರ್ಶನಿಕರೂ ಸಿಗುತ್ತಾರೆ


ಫ್ರೊ|| ಎಂ,ಡಿ, ನಂಜುಂಡಸ್ವಾಮಿ ಅವರ ಹೆಸರನ್ನು ಕೇಳದವರು ವಿರಳ. ಹೆಚ್ಚು ಕಡಿಮೆಅರ್ಧ ಶತಮಾನಗಳಷ್ಟು ಕಾಲ ಕರ್ನಾಟಕದರಾಜಕೀಯ, ಸಾಮಾಜಿಕ ಬದುಕಿನ ಮೇಲೆ ಅಪಾರ ಪ್ರಭಾವ ಬೀರಿದವರು. ರಾಜ್ಯರೈತ ಸಂಘದಅಧ್ಯಕ್ಷರಾಗಿದ್ದವರು.

ಅದೇರೀತಿಜಾಗತೀಕರಣವೆಂಬ ಭೂತ ನುಗ್ಗುತ್ತಿದ್ದಂತೆಯೇಅದರ ವಿರುದ್ಧ ಸೆಟೆದೆದ್ದು ನಿಂತು, ಮೊದಲು ಭೂತವನ್ನುತಡೆಗಟ್ಟಿ, ಇಲ್ಲವೇ ಭೂತವನ್ನುತಡೆಯುವ ಶಕ್ತಿ ನಮ್ಮರೈತರಿಗೆದಕ್ಕುವಂತೆ ಮಾಡಿಎಂದು ಆಳುವ ಸರ್ಕಾರಗಳಿಂದ ಹಿಡಿದು, ವಿಶ್ವದ ಹಲ ರಾಷ್ಟçಗಳ ನಾಯಕರಿಗೆಚಾಟಿ ಬೀಸಿದವರು.

ಅಂತಹ ಫ್ರೊಫೆಸರ್ ನಂಜುಂಡಸ್ವಾಮಿಯವರನ್ನು ಸಂದರ್ಶನ ಮಾಡುವಅಪರೂಪದ ಅವಕಾಶ, ಪ್ರತಿಕೋದ್ಯಮಕ್ಕೆ ಬಂದ ಹೊಸತರಲ್ಲೆÃ ನನ್ನೆದುರು ಬಂತು.ಅದು ನನ್ನ ಬಳಿಯೇ ನಡೆದುಕೊಂಡು ಬರುವಂತೆ ಮಾಡಿದವರು ಸಮೀವುಲ್ಲಾ.ಆಗವರು ಪತ್ರಿಕೆಯೊಂದರಚೀಫ್ರಿಪೋರ್ಟರುಆಗಿದ್ದರು.

ಒಂದು ದಿನ ಬೆಳಿಗ್ಗೆ ಹತ್ತುಗಂಟೆಗೇ ನಾನು ವಿಧಾನಸೌಧದ ಪ್ರೆಸ್ರೂಮಿಗೆ ಬಂದುಕುಂತೆ.ಆಗೆಲ್ಲ ಮೊಬೈಲು ಇರಲಿಲ್ಲ. ನಾವೇ ಕುಳಿತು ಅಲ್ಲಿದ್ದ ಲ್ಯಾಂಡ್ ಲೈನಿನ ಮೂಲಕ ನಮ್ಮ ಸಂಪರ್ಕದ ದಾರಿಗಳನ್ನು ಸಾಫ್ ಮಾಡಿಕೊಳ್ಳಬೇಕಿತ್ತು.

ಹಾಗೆಯೇಅವತ್ತು ಸಮೀವುಲ್ಲಾಅವರಿಗೆ ಫೋನು ಮಾಡಿದೆ.ಅವರುಎತ್ತಿದ ಮಾತಿಗೇಈಗ ನಿಮ್ಮನ್ನೆÃ ನೆನಸಿಕೊಳ್ಳುತ್ತಿದ್ದೆ ಕಣ್ರಿÃ ನೀವೀಗ ಒಂದುಕೆಲ್ಸ ಮಾಡಿ. ವಿಜಯನಗರಕ್ಕೆ ಹೋಗಿ ನಮ್ಮ ಫ್ರೊÃಫೆಸರ್ ನಂಜುಂಡಸ್ವಾಮಿಅವರ ಸಂದರ್ಶನ ಮಾಡಿ ನಾಳೆ ಪತ್ರಿಕೆ ಪ್ರಿಂಟಿಂಗ್ಗೆ ಹೋಗುತ್ತಿದೆ. ಕವರ್ ಪೇಜಿಗೆಅದನ್ನ ಲೀಡ್ ಮಾಡಿಕೊಳ್ಳೊÃ.ಚೆನ್ನಾಗಿರುತ್ತೆಅಂತಅಸೈನುಮೆಂಟೇಕೊಟ್ಟು ಬಿಟ್ಟರು.

ನನಗೆ ಧಿಗ್ಬಾçಂತಿ.ನಾನಿನ್ನೂ ಹೊಸಬ.ಎಲ್ಲಕ್ಕಿಂತ ಮುಖ್ಯವಾಗಿ ಫ್ರೊಫೆಸರ್ಅಗಾಧತೀಕ್ಷ÷್ಣ ಮತಿ. ಬುದ್ಧಿವಂತಿಕೆಯು ವಿಷಯದಲ್ಲಿಅವರೋ ಪರ್ವಪ್ರಾಯರಾದ ಮನುಷ್ಯ. ನಾನೋ ಸಣ್ಣವನು.

ಹಾಗಂತ ಸಮೀವುಲ್ಲಾಅವರಿಗೆ ಹೇಳಿದೆ. ಅದಕ್ಕವರು, ರೀ, ನೀವು ಸಣ್ಣವರು, ಅವರುದೊಡ್ಡವರುಅಂತ ನನಗೂ ಗೊತ್ತಿದೆ.ಆದರೆ ನೀವು ಜರ್ನಲಿಸ್ಟು.ಅವರುರೈತ ಸಂಘದ ನಾಯಕಅನೋದನ್ನು ಮಾತ್ರ ನಿಮ್ಮ ಮನಸ್ಸಿನಲ್ಲಿಟ್ಟುಕೊಂಡು ಹೋಗಿ.

ಅಂದ ಹಾಗೆ ನೀವು ಕೋಲ್ಟಾ ಬ್ಯಾಟ್ಸ್ ಮನ್ಆದಾಗಲೇಎಲ್ಲ ಚೆಂಡುಗಳನ್ನೂ ಬಾರಿಸುವುದು. ಹಾಗೆ ಬಾರಿಸಲು ಹೋದಾಗಲೇಚೆಂಡಿನ ಹೊಡೆತ ಬೀಳುವುದು. ಚೆಂಡಿನರುಚಿಯೇಗೊತ್ತಾಗದೇಇದ್ದರೆ ನಿಮಗೆ ಇನ್ ಸ್ವಿಂಗು, ಔಟ್ ಸ್ವಿಂಗು, ಬೌನ್ಸರುಗಳನ್ನು ಫೇಸ್ ಮಾಡಲುಗೊತ್ತಾಗುವುದಾದರೂ ಹೇಗೆ?ಒಳ್ಳೆÃ ಕತೆ ಹೇಳೀರಲ್ರಿÃ?ಸುಮ್ಮನೆ ಹೋಗಿ ಬನ್ನಿ. ನಾನು ಆಗಲೇ ಫ್ರೊÃಫಸರ್ಅವರ ಬಳಿ ಮಾತನಾಡಿ ಮಧ್ಯಾಹ್ನ ಹನ್ನೆರಡುಗಂಟೆಗೆಇಂಟರ್ವ್ಯೂ ಫಿಕ್ಸು ಮಾಡಿದೀನಿ ಅಂದವರೇ ಫೋನ್ ಲೈನುಕಟ್ ಮಾಡಿದರು.

ನಾನು ಪೀಕಲಾಟಕ್ಕೆ ಬಿದ್ದೆ. ಆಗಷ್ಟೆ ಪ್ರಧಾನಿಯಾಗಿದ್ದ ನರಸಿಂಹರಾಯರ ಸರ್ಕಾರ ಐತಿಹಾಸಿಕ ಗ್ಯಾಟ್‌ ಒಪ್ಪಂದಕ್ಕೆ ಸಹಿ ಹಾಕಿತ್ತು. ಮೂಲಕ ಜಾಗತೀಕರಣ ಎಂಬ ಭೂತವನ್ನುರೆಡ್ಕಾರ್ಪೆಟ್ ಹಾಕಿ ಸ್ವಾಗತಿಸಿತ್ತು. ಬೆಳವಣಿಗೆಯ ಕುರಿತು ಫ್ರೊಫೆಸರ್ ಸಹಜವಾಗಿಯೇಕ್ರುದ್ಧರಾಗಿದ್ದರು. ಸಂದರ್ಭದಲ್ಲಿಅವರ ಸಾರ್ವಜನಿಕ ಮಾತುಗಳು ಬೆಂಕಿ ಚೆಂಡುಗಳಂತಿರುತ್ತಿದ್ದವು.ಅವರ ಸಭೆಗಳಿಗೆ ಲಕ್ಷಗಟ್ಟಲೆ ಸಂಖ್ಯೆಯಲ್ಲಿರೈತರು ಬರುತ್ತಿದ್ದರು.
ಹೀಗಿರುವಾಗಅಂತವರ ಸಂದರ್ಶನ ಮಾಡಬೇಕೆಂದರೆ ಸ್ವಲ್ಪವಾದರೂತಯಾರಿ
ಬೇಕಲ್ಲ?ಸರಿ, ನಾನು ಜಾಗತೀಕರಣದದುಷ್ಪರಿಣಾಮಗಳ ಬಗ್ಗೆ, ರೈತರುಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಒಂದಷ್ಟು ಪ್ರಶ್ನೆಗಳನ್ನು ರೆಡಿ ಮಾಡಿಕೊಂಡೆ.ಪ್ರೆಸ್ರೂಮಿನಿಂದ ಹೊರಬಿದ್ದುಎಡಕ್ಕೆತಿರುಗಿ, ಡೆಡ್ಎಂಡ್ನಲ್ಲಿ ಮತ್ತೆಎಡಕ್ಕೆತಿರುಗಿದರೆ ಸಿಎಂ ಕೊಠಡಿ.ಅದಕ್ಕೆತಗಲಿಕೊಂಡಿರುವಂತೆಯೇ ಲಿಫ್ಟು.ಅದರ ಸಹಾಯದಿಂದ ಕೆಳಗೆ ಇಳಿದೆ.

ಅಲ್ಲಿಂದ ಹೊರಗೆ ಬಂದು ಇನ್ನೆನು ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ಬರಬೇಕು. ಕಡೆಯಿಂದ ಹಿರಿಯಪತ್ರಕರ್ತರಾದ ಸಾಚ ಬಂದರು.‘ಏನ್ರಿ, ಯಾವಕಡೆ ಹೊರಟಿದೀರಿ?’ ಅಂತ ಕೇಳಿದರುನಾನು ಹೇಳಿದೆಅದಕ್ಕವರು, ‘ಫ್ರೊಫೆಸರ್‌ ಇಂಟರ್ವ್ಯೂ ಮಾಡಲು ಹೊರಟಿದೀರಾಪ್ರಶ್ನೆಎಲ್ಲ ರೆಡಿ ಮಾಡ್ಕಂಡಿದೀರಾ’? ಅಂತ ಹೇಳಿದರು.

ನಾನು ಅವರಿಗೆ ನನ್ನ ಪ್ರಶ್ನಾವಳಿಗಳ ಪಟ್ಟಿ ತೋರಿಸಿದೆಅದಕ್ಕವರು, ‘ಇನ್ನೂ ಎರಡು ಕ್ವಶ್ಚನ್ನು ಬರೆದುಕೊಳ್ಳಿಅಂತ ಹೇಳಿದರು. ಹೊರಡುವಾಗ ನಾನು ಪೆಚ್ಚು ನಗೆ ನಗುತ್ತಾಸಾರ್, ನಂಜುಂಡಸ್ವಾಮಿಯವರ ಇಂಟರ್ವ್ಯೂ ಮಾಡಲು ಹೋಗುತ್ತಿದ್ದೆನೆ. ಅವರೋ ಅಗಾಧ ಬುದ್ಧಿವಂತರು. ನನಗೋ ತಿಳಿವಳಿಕೆ ಕಡಿಮೆಎಂದೆ.

ಅದಕ್ಕೆನೀಗಾತಿಳಿವಳಿಕೆ ಕಡಿಮೆ ಇದ್ದಾಗಲೇ ಕಣ್ರಿ ಮದುವೆ ಮಾಡದುಮದುವೆ ಆದ ಮೇಲೆ ಏನೇನು ಜವಾಬ್ದಾರಿ ಬಂದು ಹೆಗಲ ಮೇಲೆ ಬೀಳುತ್ತೆ ಅಂತ ಮುಂಚೆಯೇ ಗೊತ್ತಾಗಿ ಬಿಟ್ಟರೆ ತುಂಬ ಜನ ಮದುವೇನೇ ಆಗಲ್ಲ. ನೆಮ್ಮದಿಯಾಗಿ ಹೋಗ್ರಿ, ಇಂಟರ್ವ್ಯೂ ಮಾಡ್ರಿ.ನಿಮ್ಮಎಕ್ಸ್ಪೀರಿಯನ್ಸ್ ಬಿಲ್ಡ್ ಮಾಡ್ಕಳ್ರಿ.ಮುಂದೆ ಫೀಲ್ಡಿನಲ್ಲಿ ಇನ್ನೂ ದೊಡ್ಡ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆಅಂತ ಹೇಳಿದ ಸಾಚ ಹೊರಟೇ ಬಿಟ್ಟರು.

ಸರಿ, ನಾನು ವಿಜಯನಗರಕ್ಕೆ ಹೋದೆ.ಮನೆಯೊಳಗೆ ಹೋಗಿ ಬಲಕ್ಕೆ ತಿರುಗಿದರೆ ಫ್ರೊÃಫೆಸರ್ರೂಮು. (ನನಗೆ ನೆನಪಿರುವಂತೆ) ಅದು ಬರೀರೂಮಲ್ಲ. ಅದೊಂಥರಾಅಚ್ಚುಕಟ್ಟಾದ ಲೈಬ್ರರಿ.ಅದೇ ಮೊದಲ ಬಾರಿ ಫ್ರೊಫೆಸರ್ಅವರನ್ನುಇಂಟರ್ವ್ಯೂ ಮಾಡಲುಅಣಿಯಾಗಿದ್ದೆ.

ನೋಡಿದಕೂಡಲೇಅವರು, ‘ಕೂತ್ಕಳ್ರಿಅಂತಖುರ್ಚಿ ತೋರಿಸಿದರು.ಲೋಕಾಭಿರಾಮದ ಮಾತೇಇಲ್ಲ. ಎತ್ತಿದ ಮಾತಿಗೇ, ‘ನಿಮ್ಮದೇನುಕ್ವಶ್ಚನ್ಇದೆ ಕೇಳಿಎಂದರು.ನಾನು ರೈತರ ಸಾಲ ವಸೂಲಾತಿಯಕುರಿತು ಸರ್ಕಾರತೋರುತ್ತಿರುವ ವಿಪರೀತಆಸಕ್ತಿಯಕುರಿತು ಹೇಳಿದೆ.

ಅದಕ್ಕವರು, ‘ದೇಶಕ್ಕೆಆಹಾರ ಬೇಕು ಅಂತ ಹಸಿರು ಕ್ರಾಂತಿ ಮಾಡಿದ ಪರಿಣಾಮವಾಗಿಇವತ್ತು ಭೂಮಿ ಬರಡಾಗುತ್ತಿದೆ.ಯಾವ ಬೆಳೆ ಹಾಕಿದರೂರೈತನಿರೀಕ್ಷಿಸಿದ ಬೆಳೆ ಬರುತ್ತಿಲ್ಲ. ಬಂದ ಬೆಳೆ ಮಾರುಕಟ್ಟೆಗೆ ಹೋಗುವುದರ ಒಳಗಾಗಿ ಮಧ್ಯವರ್ತಿಗಳ ಕಾಟ.ಮಾಡಿರುವ ಸಾಲ ಬೇರೆ.ರೈತ ಹಣ್ಣಾಗಿ ಹೋಗಿರ್ತಾನೆ. ಹೀಗಾಗಿ ಸಾಲ ವಸೂಲಾತಿಯನ್ನು ಸರ್ಕಾರತಕ್ಷಣ ನಿಲ್ಲಿಸಬೇಕು. ಇಲ್ಲದಿದ್ದರೆ ಸಾಲ ವಸೂಲಾತಿಗೆ ಹೋಗುವ ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ ಹಾಕಿ ಬಾರುಕೋಲಿನಿಂದ ಹೋಡೀತೀವಿಎಂದರು.

ನಾನು ಸುಮ್ಮನೆ ನಕ್ಕೆ.ಗಮನಿಸಿದ ಫ್ರೊÃಫೆಸರು, ‘ಯಾಕೆ ನಕ್ಕಿರಿ?ಇದು ನಗೋ ವಿಷಯಾನಾ?’ಅಂತ ಕೇಳಿದರು.ನಾನು ಗಂಭೀರವಾಗಿ ಕುಳಿತು, ಇಲ್ಲ ಸಾರ್, ಸುಮ್ಮನೆ ಸ್ಟಾಂಟೇನಿಯಸ್ ಆಗಿ ನಕ್ಕೆ ಅಷ್ಟೆÃ ಎಂದೆ.ಅದಕ್ಕವರುಚಳುವಳಿ ನಡೆದಾಗರೈತರೂ ಸ್ಟಾಂಟೇನಿಯಸ್ಆಗಿಯೇಗಲಾಟೆ ಮಾಡ್ತಾರೆ. ಹಾಗಂತ ಪೋಲಿಸರುಅವರನ್ನು ಸುಮ್ಮನೆ ಬಿಡ್ತಾರಾ? ಐಪಿಸಿ ಸೆಕ್ಷನ್ ಅಡಿ ಕೊಲೆ, ಸುಲಿಗೆ, ದೊಂಬಿ, ಮಾನಭಂಗಅಂತ ಕೇಸು ಫಿಟ್ಟು ಮಾಡಿಜೈಲಿಗೆ ಕಳಿಸುತ್ತಾರೆ.ಆದರೆಅವರಗಲಾಟೆಗೂಒಂದುಉದ್ದೆÃಶಇರತ್ತೆ.ಸರ್ಕಾರ ನಮ್ಮ ನೋವಿಗೆ ಸ್ಪಂದಿಸುತ್ತಿಲ್ಲ ಎಂಬ ನೋವಿರತ್ತೆ.ಅದಕ್ಕೆÃ ಹೇಳಿದ್ದು, ಏನನ್ನೆÃ ಮಾಡಿದರೂ, ಸ್ಟಾಂಟೇನಿಯಸ್ ಆಗಿ ಮಾಡಿದರೂಅದಕ್ಕೊಂದುಉದ್ದೆÃಶಇರಬೇಕುಎಂದರು.

ಬಿತ್ತಲ್ಲಪ್ಪಾ ಮೊದಲನೇ ಬಾಲೇ ಬೌನ್ಸರುಅಂದುಕೊಂಡೆ.ಆಗವರು, ‘ಸರಿ, ಸರಿ, ಮೇಲೆದ್ದು ಕಪಾಟಿನಲ್ಲಿರುವ ನಾಲ್ಕನೇ ಪುಸ್ತಕ ತಗಳ್ಳಿಎಂದರು.

ನಾನು ವಿಧೇಯ ವಿದ್ಯಾರ್ಥಿಯಂತೆ ಮೇಲೆದ್ದುಅವರು ಹೇಳಿದ ಪುಸ್ತಕ ತೆಗೆದುಕೊಂಡೆ. ಪುಸ್ತಕದಲ್ಲಿಎಂಭತ್ನಾಲ್ಕನೇ ಪುಟತಗೀರಿಎಂದರು.ಅವರು ಹೇಳಿದಂತೆ ಮಾಡಿದೆ.ಆಗವರುಇವತ್ತುಜಾಗತೀಕರಣದೇಶಕ್ಕೆ ನುಗ್ಗಿದರೆ.ರೈತ ಬಿತ್ತೊ ಬೀಜಗಳ ಮೇಲೂ ಹಕ್ಕು ಸ್ವಾಮ್ಯ ಸಾಧಿಸಲು ಬಹುರಾಷ್ಟಿ ಕಂಪನಿಗಳು ಹೊರಟಿವೆ. ಅದರಿಂದ ನಮ್ಮರೈತರುಅನುಭವಿಸಬೇಕಾದ ಕಷ್ಟ ಏನು? ಅಂತಅದರಲ್ಲಿದೆ.ಓದಿ ನೋಡಿಎಂದರು.ನಾನು ಓದಿದವನುತಲೆಯೆತ್ತಿಅವರತ್ತ ನೋಡಿದೆ.

ಅದರಲ್ಲಿರೋದುಅರ್ಥವಾಯಿತಾ?’ಎಂದರು.ನಾನು ಮಾತನಾಡಲಿಲ್ಲ. ಅದಕ್ಕವರೇಉತ್ತರಿಸುತ್ತಾ ಹೋದರು.’ ದೇಶದಅನ್ನವನ್ನೆà ಬಹುರಾಷ್ಟಿçà ಕಂಪನಿಗಳು ಕಸಿದುಕೊಳ್ಳಲು ಹೊರಟಿವೆ. ಇದರಿಂದರೈತ ಬೀದಿಗೆ ಬಿದ್ದರೆ ನಾಳೆ ನೀವೂ ಬೀದಿಗೆ ಬೀಳ್ತಿÃರಿ.ಅನ್ನಕೊಡುವವನೇ ಬೀದಿಗೆ ಬಿದ್ದರೆ ನೀವೇನು ಮಾಡಲು ಸಾಧ್ಯ?ಕುಡಿಯೋ ನೀರಿಗೂದುಡ್ಡುಕೊಟ್ಟುಕುಡಿಯಬೇಕಾದ ಅನಿವಾರ್ಯತೆ ಬಂದರೆಎಲ್ಲರಿಗೂ ಕಷ್ಟ ಏನು ಅಂತಅರ್ಥವಾಗತ್ತೆಎಂದರು.

ನನಗೆ ಸಮೀವುಲ್ಲಾ ಹೇಳಿದ ಔಟ್ ಸ್ವಿಂಗು, ಇನ್ ಸ್ವಿಂಗು, ಬೌನ್ಸರುಗಳ ಹೊಡೆತಒಂದರಮೇಲೊಂದು ಬಿದ್ದಅನುಭವವಾಗತೊಡಗಿತು.ಅವರು ಮಾತು ಮುಂದುವರಿಸಿದರುಅದಕ್ಕೆÃಕಣ್ರಿÃ. ನೆಲದಲ್ಲಿಅನ್ನದಾತನೇ Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought