Chania

ಮಹಿಳೆ ಮತ್ತು ಸಂಗೀತ

ಡಾ॥ ವರದಾ ಶ್ರೀನಿವಾಸ

ಪ್ರತಿಭೆ ಯಾರೊಬ್ಬರ ಮೀಸಲು ಸ್ವತ್ತಲ್ಲ. ಅದಕ್ಕೆ ಗಂಡು ಹೆಣ್ಣು ಎಂಬ ಲಿಂಗ -ಭೇಧವಿಲ್ಲ. ಜಾತಿಧರ್ಮ , ವರ್ಗ-ಭೇಧಗಳ ಅಡೆತಡೆಯಿಲ್ಲ. ಶತಮಾನದ ಮಧ್ಯಭಾಗದಲ್ಲಿ ಸಂಪ್ರದಾಯದ ಬಂಧನ ಕಳಚಿ  ಮುಕ್ತಳಾದ ಮಹಿಳೆ ಅತಿ ಕಡಿಮೆ ಕಾಲದಲ್ಲಿ ಸರ್ವ ಕ್ಕ್ಷೇತ್ರಗಳಲ್ಲಿ ತನ್ನ ಪ್ರತಿಭೆ-ಬುದ್ದಿವಂತಿಕೆ-ಸಾಧನೆಗಳಿಂದ ಪುರುಷರಿಗೆ ಸರಿಸಮಾನವಾಗಿ ಸ್ಪಂದಿಸುತ್ತಿದ್ದಾಳೆ, ಸ್ಪರ್ಧಿಸುತ್ತಿದ್ದಾಳೆ, ಪ್ರಗತಿ ಸಾಧಿಸುತ್ತಿದ್ದಾಳೆ. ತಾನು ಪ್ರವೇಶಿಸಿದ ಪ್ರತಿಯೊಂದು ಕಾರ್ಯ ಕ್ಕ್ಷೇತ್ರದಲ್ಲಿ ಹಳೆಯದನ್ನು ಮೈಗೂಡಿಸಿ  ಹೊಸದನ್ನು ಅಂಗೀಕರಿಸಿ, ಸಮರ್ಪಕ ಕಾರ್ಯ ಕೌಶಲ, ಸಾಮರ್ಥ್ಯದಿಂದ ಮಹಿಳೆ ಅತ್ಯಂತ ಸಮರ್ಥಳೆನಿಸಿಕೊಂಡಿದ್ದಾಳೆ.
ಹೊಸ ಚಿಗುರು, ಹಳೆ ಬೇರು
ಕೂಡಿರಲು ಮರಸೊಬಗು,
ಹೊಸಯುಕ್ತಿ ಹಳೆತತ್ತ್ವದೊಡಗೂಡೆ ಧರ್ಮ,
ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳವಿಸೆ
ಜಸವು ಜೀವನಕೆ ಮಂಕುತಿಮ್ಮ.
                              -ಡಿ. ವಿ. ಜಿ
ಕಲೆ ಒಂದು ಸಮಾಜದ ಸಾಮಾನ್ಯ ಜನರ ಸುಸಂಸ್ಕೃತ ಜೀವನದ ಹೆಗ್ಗುರುತು. ಸಮಾಜ ಸುಧಾರಣೆಯನ್ನು ಸುಲಭವಾಗಿ ಸಾಧಿಸಬಲ್ಲ ಸಾಧನವೇ ಕಲೆ. ಒಂದು ರಾಷ್ಟç ಸಂಸ್ಕೃತಿಯನ್ನು ಗುರುತಿಸಲು ರಾಷ್ಟ್ರದ ಕಲೆ. ಜನ ಜೀವನಗಳೇ ಆಧಾರ. ಭಾರತೀಯ ಸಂಸ್ಕೃತಿಯ ಇತಿಹಾಸ ಐದು ಸಾವಿರ ವರ್ಷಗಳಷ್ಟು ಪುರಾತನವಾದುದು. ಅಷ್ಟೇ ದೀರ್ಘವಾದ ಇತಿಹಾಸ ಲಲಿತಕಲೆಗೂ ಇದೆ. “ಕಲೆ ಮಾನವ ಜೀವನವನ್ನು ರೂಪಿಸಿ, ಪರಸ್ಪರ ಸ್ನೇಹ, ಮಧುರ ಸಂಪರ್ಕಗಳನ್ನುಂಟು ಮಾಡುವುದರ ಮೂಲಕ ಜನತೆಯಲ್ಲಿ  ಸಹಕಾರ, ಸೌಹಾರ್ದವನ್ನುಂಟುಮಾಡುತ್ತದೆ. ಎಂಬುದು ಕಲೆಯನ್ನು  ಕುರಿತಂತೆ ವಿಶ್ವಕವಿ ರವೀಂದ್ರರ ವಾಣಿ.
ಕಲಾರತ್ನಂ ಗಾನಮ್ಸಂಗೀತವು ಕಲೆಗಳಲ್ಲಿ ಅತ್ಯಂತ ಶ್ರೇಷ್ಠವಾದ ಕಲೆ. ಇದು ಅತ್ಯಂತ ಪುರಾತನವಾದದು. ಜಗತ್ತು ಸೃಷ್ಟಿಯಾದಾಗಲೇ ಸಂಗೀತದ ಉದಯವಾಯಿತು. ಮಾನವ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪ್ರಾರಂಭಿಸಿದಾಗಲೇ ಸಂಗೀತವೂಭಾವಾಭಿವ್ಯಕ್ತಿ  ಮಾಧ್ಯಮವಾಯಿತು. ಮಾನವನ ಮನೋಭಾವಗಳ ಅಭಿವ್ಯಕ್ತಿಗೆ ಸಂಗೀತ ಮತ್ತು ಅದರ ಸಾಧನೆ ಅತ್ಯಂತ ಉಪಯುಕ್ತ ಸಾಧನ. ಸಂಗೀತವನ್ನುಭಾವದ ಭಾಷೆಯೆನ್ನುತ್ತಾರೆ. ಗಾಯಕನ ಅಂತರಾಳದಿಂದ ಹೊಮ್ಮುವ ಒಂದು ಅಲೌಕಿಕ ಅನುಭವಸಂಗೀತ”. ಗೀತ, ವಾದ್ಯ, ನೃತ್ಯ ಇವು ಮೂರು ಸೇರಿ  ಸಂಗೀತವಾಗಿದೆಯೆಂಬುದು ಪ್ರಾಚೀನ ವಿದ್ವಾಂಸರ ಅಭಿಪ್ರಾಯ. ಇದು ಬೇರೆ ಕಲೆಗಳಂತೆ ದೃಶ್ಯ ಪ್ರಧಾನವಾದುದಲ್ಲ. ಭಾವರಸ ಪ್ರಚೋದಕವಾದುದು. ಶಾಸ್ತç ಮತ್ತು ಸಂಪ್ರದಾಯಗಳ ಬಂಧವಿಲ್ಲದೇ ಆಡುಭಾಷೆಯಲ್ಲಿ ಅಂದಿನಿಂದ ಇಂದಿನವರೆಗೆ ಸಾಗಿ ಬಂದಿರುವ `ಜನಪದ ಸಂಗೀತಸಂಗೀತದ ಮೂಲವೆನ್ನಬಹುದು.

ಸಂಗೀತ ಇತಿಹಾಸ
ಸಂಗೀತ ಸಾಹಿತ್ಯ ನಡೆದು ಬಂದ ದಾರಿಯನ್ನು ಅವಲೋಕಿಸಿದಾಗ ಸಾಮಾನ್ಯವಾಗಿ ಪುರುಷರೇ ಶಾಸ್ತ್ರೀಯಗ್ರಂಥ ರಚಕರಾಗಿರುವುದು ಕಂಡುಬರುತ್ತದೆಯೇ ಹೊರತು ಎಲ್ಲೂ ಮಹಿಳೆಯ ಹೆಸರು ಕೇಳಿ ಬರುವುದೇ ಇಲ್ಲ. ಹಾಗೆಯೇ ವಾಗ್ಗೆಯಕಾರರ ಹೆಸರುಗಳು ಇವೆಯೇ ಹೊರತು ಸಂಗೀತಕಾರ್ತಿಯವರ ಹಾಗೂ ವಿದುಷಿಯರ ಹೆಸರು ಕೇಳಿ ಬರುವುದಿಲ್ಲ. ಭಕ್ತಿಪರವಶತೆಯಲ್ಲಿ ಹಾಡಿದ ವೀರಾಬಾಯಿ, ಅಕ್ಕ ಮಹಾದೇವಿಯವರ ಹೆಸರುಗಳು. ಇದಕ್ಕೆ ಕಾರಣ ಮುಸ್ಲಿಮರ ಆಡಳಿತದ ಪ್ರಭಾವದಿಂದ ಮಹಿಳೆ ಕೇವಲ ಸಂಸಾರಿಯಾಗಿ, ತಾಯಿಯಾಗಿ ನಾಲ್ಕುಗೋಡೆಗಳೊಳಗೆ ಬಂಧಿಯಾಗಿ ಇರಬೇಕಾದ ಕಾಲ ಬಂದುದು. ಹಾಗೂ ಬೂದಿ ಮುಚ್ಚಿದ ಕೆಂಡವಾಗಿಯೇ ಮಹಿಳೆ ಇರಬೇಕಾದ ಅನಿವಾರ್ಯತೆಗೆ ಒಳಗಾಗಬೇಕಾಗಿ ಬಂದುದು.

ತರುವಾಯದ ಮಹಿಳೆಯರು ಸಂಗೀತಕಲೆಯ ಆರಾಧಕರಾಗಿದ್ದರು. ಸಂಗೀತ ನೃತ್ಯವೇ ಮೊದಲಾದ ಲಲಿತಕಲೆಗಳ ಮೂಲಕ ವಿಖ್ಯಾತಿ ಹೊಂದಿ ಸ್ವತಃ ಕಲಾವಿದೆಯಾಗಿಪ್ರತ್ಯುತ್ಪನ್ನ ವಾಚಸ್ಪತಿಯಾಗಿದ್ದ ವಿಷ್ಣುವರ್ಧನನ ಪಟ್ಟದರಸಿ ಗಾನ ಸರಸ್ವತಿ ಶಾಂತಲಾದೇವಿ ಇಂದಿಗೂ ಜನಮನದಲ್ಲಿ ಚಿರವಾಗಿ ಉಳಿದಿದ್ದಾಳೆ. ರಾಷ್ಟçಕೂಟ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರದ ಅರಸರ ಕಾಲದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ವಾಸ್ತು, ಶಿಲ್ಪ ಕಲೆಗಳು ಮೇರು ಸ್ಥಿತಿಯನ್ನು ತಲುಪಿದ್ದವು. ಎಲ್ಲ ಕಲೆಗಳ ಪ್ರಭಾವ ಎಲ್ಲರ ಮೇಲೂ ಬಿದ್ದಿತು. ಅದರಲ್ಲೂ ಸಂಗೀತ ಶಿಶುರ್ವೇತ್ತಿ, ಪಶುರ್ವೇತ್ತಿ, ಗಾನರಸಮ್ವೇತ್ತಿ, ಫಣೀ-ಪಶು ಶಿಶುಗಳಾದಿಯಾಗಿ ಸರ್ವರನ್ನೂ ಮೋಹಿಸುವ ಶಕ್ತಿಯುಳ್ಳದ್ದೂ ಆಗಿತ್ತು.

ಇಂಥ ಸಂಗೀತದ ಮೂಲ ಜನಪದ ಗೀತೆಗಳು. ಎಲ್ಲರೂ ಸಂರಕ್ಷಿಸಬೇಕಾದ ಪರಂಪರಾಗತ ಸಾಂಸ್ಕೃತಿಕ ಆಸ್ತಿಗಳು. ಜನವಾಣಿ ಬೇರು. ಕವಿ ವಾಣಿ ಹೂವು ಎಂದಿದ್ದಾರೆ ಶ್ರಿ ಅವರು. ನೃಪತುಂಗನ ಮಾತಿನಂತೆ ಕರ್ನಾಟಕ ಜನರುಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಮತಿಗಳ್ಎಂಬುದು ಜನಪದ ಗೀತೆಗಳನ್ನು ರಚಿಸಿದ ಅಜ್ಞಾತ ಕವಿಗಳಿಗೆ ಸಲ್ಲುತ್ತದೆ. ರಾಗಿ ಬೀಸುವಾಗ, ಭತ್ತ ಕುಟ್ಟುವಾಗ, ಕಷ್ಟದ ಕೆಲಸ ಮಾಡುವಾಗ, ಕರುಳ ಮಿಡಿದಂತೆ, ಅಂತರಂಗ ತಟ್ಟುವಂತೆ, ಹಳ್ಳಿಗರ ಜೀವನ ಸಾರವನ್ನೆ ಹೊರಹೊಮ್ಮಿಸುವಂತೆ ಹಾಡಿದ ಮಣ್ಣಿನ ಮಕ್ಕಳ, ಅದರಲ್ಲೂ ಗ್ರಾಮೀಣ ಮಹಿಳೆಯರ ಹಾಡುಗಳು ನಮ್ಮ ಸಂಸ್ಕೃತಿಸಾರವಾಗಿವೆ.

ಬೆಳಗಾಗ ನಾನೆದ್ದು ಯರ್ಯಾರ ನೆನೆಯಲಿ
ಎಳ್ಳು ಜೀರಿಗೆ ಬೆಳೆಯೋಳ, ಭೂಮಿತಾಯ 
ಎದ್ದೊಂದು ಗಳಿಗೇ ನೆನೆದೇನು ||

ಇಲ್ಲಿನ ಬಹುಪಾಲು ಗೀತೆಗಳನ್ನು ಹೆಂಗಸರೇ ಹಾಡಿದ್ದಾರೆ. ಇನ್ನುಳಿದ ಹಾಡುಗಳನ್ನು ಹೆಣ್ಣೆ ಆವರಿಸಿಕೊಂಡಿದ್ದಾಳೆ. ಹೆಂಗಸರು ತಮ್ಮೆಲ್ಲ ಭಾವನೆಗಳಿಗೆ ದನಿ ನೀಡಲು ಪ್ರಯತ್ನಿಸಿದ್ದಾರೆ. ತೋಪಮ್ಮ, ಬಿಲ್ಲನಕೋಟೆ ಲಕ್ಕಮ್ಮ, ಫಕೀರವ್ವ ಗುಡಿಸಾಗರ, ಬೇಡನಹಳ್ಳಿ ಗೌರಮ್ಮ, ನಾಗಮ್ಮ, ಮಾದಮ್ಮ, ಹುಚ್ಚಮ್ಮ, ಸೋಲಿಗರ ಗುರಮ್ಮ, ಮೊದಲಾದ ಎಲೆಯ ಮರೆಯ ಹೂವಂತಿದ್ದ ಗ್ರಾಮೀಣ ಮಹಿಳೆಯರನ್ನು ಜಾನಪದ ಅಕಾಡೆಮಿ ಗುರುತಿಸಿ, ಅವರ ಹಾಡುಗಾರಿಕೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಅನಕ್ಷರಸ್ತೆಯರಾದರೂ ನಮ್ಮ ಸಾಂಸ್ಕೃತಿಕ ಆಸ್ತಿಯನ್ನು ತಮ್ಮ ನೆನಪಿನ ಭಂಡಾರದಲ್ಲಿ ನೆಲೆಗೊಳಿಸಿ ತಮ್ಮ ಹಾಡುಗಾರಿಕೆಯಲ್ಲಿ ಅಲ್ಲಲ್ಲಿ ಪ್ರಸಿದ್ಧರಾಗಿದ್ದಾರೆ ಮಹಿಳೆಯರು.

ದೇವದಾಸಿಯರು 
 ಇತಿಹಾಸ ಕಾಲದ ಸಮಾಜದಲ್ಲಿ ಕಲೆಗಳ ವಿಷಯದಲ್ಲಿ ದೇವದಾಸಿಯರ ಪಾತ್ರ ಹಿರಿದಾಗಿತ್ತು. ಉಚ್ಛಕುಲದ ಮಹಿಳೆಯರೂ ಸಂಗೀತ ನೃತ್ಯಕಲೆಗಳಲ್ಲಿ ನೈಪುಣ್ಯವನ್ನು ಪಡೆದು ದೇವರ ಸನ್ನಿಧಿಯಲ್ಲಿ ಹಾಡಿ, ನರ್ತಿಸಿ ಸೇವೆ ಸಲ್ಲಿಸುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ಹೊಯ್ಸಳರ ದೊರೆ ವಿಷ್ಣುವರ್ಧನನ ಮಡದಿ ಶಾಂತಲೆ, ರಾಜನರ್ತಕಿಯರು ಆಸ್ಥಾನದಲ್ಲಿ ನರ್ತಿಸುವಾಗ ಹಾಡುತ್ತಿದ್ದರು. ಅವರೆಲ್ಲರ ಬಗ್ಗೆ ಸಮಾಜಕ್ಕೆ ಅಪಾರ ಗೌರವವಿತ್ತು. ಮುಂದೆ ಗೌರವಯುತವಾದ ಸೇವೆ ಕಳಂಕಿತಗೊಂಡಾಗ ಸಂಗೀತ, ನರ್ತನ ಮತ್ತು ನಾಟಕಗಳಂಥ ಕಲೆಗಳೊಡನೆ ಸಂಬಂಧವಿರಿಸಿಕೊಂಡ ದೇವದಾಸಿಯರಿಂದ ಕಲೆಗಳಿಗೂ ಕಳಂಕ ತಟ್ಟಿತು. ಸಂಗೀತ ನರ್ತನ ನಾಟಕಗಳನ್ನು ಆರಿಸಿಕೊಂಡ ಮಹಿಳಾ ಕಲಾವಿದೆಯರನ್ನು ತಿರಸ್ಕಾರದಿಂದ ಕಾಣಲು ಇದೇ ಕಾರಣ. ಆದರೆ ಶತಮಾನದ ಮಹಿಳೆಯರು ಉತ್ತಮ ಹೆಸರನ್ನು ಪಡೆದಿದ್ದಾರೆ. ಸಂದರ್ಭದಲ್ಲಿ ಬೆಂಗಳೂರು ನಾಗರತ್ನಮ್ಮ ಅವರನ್ನು ಇಲ್ಲಿ ಉಲ್ಲೆಖಿಸುವುದು ಸೂಕ್ತ. ಬಿಡಾರಂ ಕೃಷ್ಣಪ್ಪವರ ಶಿಷ್ಯೆಯಾದ ಅವರು ದೇವದಾಸಿಯರಾದರೂ ತಮ್ಮ ಸಂಪೂರ್ಣ ಸಂಪಾದನೆಯನ್ನು ಅಂದರೆ ಸಂಗೀತ ಕಛೇರಿಯಿಂದ ಗಳಿಸಿದ್ದುದನ್ನು, ಹಾಗೂ ಹಣವನ್ನು ಮತ್ತು ಆಭರಣಗಳನ್ನು ಮಾರಿಬಂದ ಗಳಿಕೆಯನ್ನು ತ್ಯಾಗರಾಜ ಸಮಾಧಿ ನಿರ್ಮಿಸಲು ಬಳಸಿದರಲ್ಲದೇ ತ್ಯಾಗರಾಜರ ಆರಾಧನೆ ಅವಿಚ್ಛಿನ್ನವಾಗಿ ನಡೆಯುವಂತೆ ಮಾಡಿದರು.

ಆಧುನಿಕ ಕಾಲ
ಹಿಂದೆಯೇ ಸೂಚಿಸಿರುವಂತೆ ಭಾರತದಲ್ಲಿ ಹಿಂದುಸ್ತಾನೀ ಸಂಗೀತ ಮತ್ತುಕರ್ನಾಟಕ ಸಂಗೀತಎಂಬ ಎರಡು ಪದ್ದತಿಗಳು. ಎರಡೂ ಸಂಪ್ರದಾಯಗಳ ಮೂಲಾಂಶ ಒಂದೇ ಆದರೂ ದಕ್ಷಿಣ ದೇಶದಲ್ಲಿ ಕರ್ನಾಟಕ ಸಂಗೀತವೆಂದು ಪ್ರತ್ಯೆಕ ಪದ್ದತಿಯಾಗಿ ಉಳಿಯಲು ಪರ್ಷಿಯಾ, ಅರೇಬಿಕ್ ಸಂಸ್ಕೃತಿಯ ಪ್ರಭಾವದಿಂದ ದೂರವಿದ್ದುದೇ ಕಾರಣ.

ಕರ್ನಾಟಕ ಸಂಗೀತ ಎಂದಾಗ ಬರೀ ಕರ್ನಾಟಕಕ್ಕೆ  ಅನ್ವಯಿಸುವುದೆಂಬ ಭಾವನೆಯನ್ನು ಹೊಂದಬಾರದು. ಭಾರತದಲ್ಲಿ ಎರಡು ಬಗೆಯ ಕ್ಷೆತ್ರಗಳಲ್ಲಿ ಅನೇಕ ಮಹಿಳೆಯರು ಜಗತ್ ಪ್ರಸಿದ್ಧರಾಗಿದ್ದಾರೆ. ಈಗಿನ ಮೂವತ್ತು ವರ್ಷಗಳಲ್ಲಂತೂ ಹಿಂದೆಂದೂ ಇಲ್ಲದಷ್ಟು ಪ್ರಮಾಣದಲ್ಲಿ ಮಹಿಳೆಯರು ಕ್ಷೆತ್ರದಲ್ಲಿ ಫಲವತ್ತಾದ ಕೃಷಿ ಮಾಡಿದ್ದಾರೆ, ಶತಮಾನದ ಎರಡನೇ ದಶಕದಲ್ಲಿನ ದಕ್ಷಿಣದೇಶದ ಸುಪ್ರಸಿದ್ದ ಶಾಸ್ತ್ರೀಯ ಸಂಗೀತಗಾರ್ತಿ ವೀಣಾ ಧನಮ್ಮಾಳ್ , ಕೋಲಾರದ ನಾಗರತ್ನಮ್ಮ, ತಮ್ಮ ಅನುಪಮ ಹಾಡುಗಾರಿಕೆಯಿಂದ ಅಮರರಾಗಿದ್ದಾರೆ. ಡಾ|| ಗಂಗೂಬಾಯಿ ಹಾನಗಲ್, ಪದ್ಮಭೂಷಣ ಪ್ರಶಸ್ತಿ ಪಡೆದ ಹಾಗೂಹಿಂದೂಸ್ತಾನೀ Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought