Chania

ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು
 # ಪ್ರೊ|| ವಸಂತ ಕುಷ್ಟಗಿ. ಎಂ..ಡಿ.ಲಿಟ್
 ಎಂ..ಜಿ೨೬, ಆದರ್ಶನಗರ
 ಮೊದಲ ಹಂತ, ಕಲಬುರಗಿ-೫೮೫೧೦೫

ನಿರಾಸೆಯ ಶತಮಾನದ ೧೯ ವರ್ಷಗಳಲ್ಲಿ ದಿನೇ ದಿನೇ ಭ್ರಷ್ಟಾಚಾರದಕುಣಿತದಆರ್ಭಟವು ಬೆರಳು ತಟ್ಟಿದೆಡೆ; ಕಣ್ಣಾಡಿಸಿದೆಡೆ; ಉಸಿರಾಟದ ಏರು-ಇಳಿವಿನಲ್ಲಿ; ಕಿವಿಗೆ ಬಂದು ಅಪ್ಪಳಿಸುವ ಮಾತಿನ ಅಲೆಗಳಲ್ಲಿ; ತುಟಿಗಳ ಮಿಡುಕಿನಲ್ಲಿ; ನಾಲಗೆಯ ಹೊಯ್ದಾಟದಲ್ಲಿ-ಎಲ್ಲೆಂದರಲ್ಲಿಅಲುಗಾಡಿಸುತ್ತಿದೆ. ವರ್ತಮಾನ ಪತ್ರ, ರೇಡಿಯೋ, ದೂರದರ್ಶಗಳಲ್ಲಿ ಭ್ರಷ್ಟಾಚಾರದ ಮಾತಿಲ್ಲದೆ ಸುದ್ದಿಗಳಿಲ್ಲ; ವವ್ಯಹಾರವಿಲ್ಲ ಭ್ರಷ್ಟತೆ ಮತ್ತು ಭಾರತಎಂಬುದುಅರ್ಥವಿಲ್ಲದಜಪವಾಗಿದೆ.ಬೇಲಿಯೇಎದ್ದು ಹೊಲ ಮೇಯುವದುರಂತಚಿತ್ರಣ ಭಯಾನಕತೆಯನ್ನುತಂದಿದೆ.ನೀತಿಯಕ್ರಮಕ್ಕೆಗತಿಯಿಲ್ಲದಾಗಿ, ಪ್ರತಿಯೊಬ್ಬರೂ ಭ್ರಷ್ಟಾಚಾರವನ್ನೆÃ ಶಿಷ್ಟಾಚಾರವೆಂದು ಪರಿಗಣಿಸುತ್ತಾ, ಶಿಷ್ಟಾಚಾರದ ಸ್ವಭಾವವನ್ನು ಗಾಳಿಗೆ ತೂರಿಬಿಟ್ಟಿದ್ದಾರೆ.


ಹೀಗಾಗಿ ದುಡ್ಡೆÃದೊಡ್ಡಪ್ಪನಾಗಿ, ಸಾರ್ವಭೌಮವಾಗಿದೆ.ಅದುಯಾವ ಮಾರ್ಗದಿಂದ ಬಂದರೂ ಸರಿ, ಆತನಿಗೇ ಸಭ್ಯತೆಯ ಸಲಾಮು ಹೊಡೆದು, ಅಸಭ್ಯವಾಗಿ ನಿಂತು, ಅಸಭ್ಯತೆಯಿಂದಇರುವುದೇ ಸಭ್ಯತೆಯೆನಿಸುತ್ತದೆ.ಅಹಿಂಸೆಯಜಪಮಾಡಿದರೂ, ಅದು ಹಿಂಸಾ ಸ್ವರೂಪವಾಗಿ, ಹೆಸರಿಗೆ ಮಾತ್ರಅಹಿಂಸೆಯೆಂದೇ ಕರೆಸಿಕೊಳ್ಳುತ್ತಿದೆ.ಇದಕ್ಕೆಉಪಾಯವೇನಾದರೂಇದೆಯೇಎಂದುಯೋಚಿಸುತ್ತಾ ಹೋದರೆ, ಎಲ್ಲಿಯೂಉಪಾಯದದಾರಿಕಾಣುತ್ತಿಲ್ಲ.

ಹೌದು! ಪೂರ್ಣ ಹೌಹಾರಿದಾಗ, ಎಲ್ಲಿಯೋಒಂದುಕಡೆ ಮಿಣಕುಕಾಣುತ್ತದೆ.ದಿಕ್ಕುಗಳಲ್ಲೆಲ್ಲ ಗಾಢಾಂಧಕಾರಕವಿದಾಗ, ಮಿಣಕುಜ್ಞಾನವೇಚಿಲುಮೆಯಾಗುತ್ತಾ ಸಾಗಿದಾಗ, ಅಲ್ಲಿ ಪರಿಹಾರದೊರೆಯುತ್ತದೆ ಎಂಬ ಹುಚ್ಚು ಹೊಳೆಯಲ್ಲಿ ಪ್ರವಾಹದಗುಂಟಾಈಜಿದಾಗ, ನನಗೇನು ಹುಲ್ಲು ಕಡ್ಡಿಸಿಕ್ಕಿತು. ಹುಲ್ಲುಕಡ್ಡಿಯನ್ನುಒರೆಗೆ ಹಚ್ಚಿಗೀಚಿದಾಗಉಚಿತಎಂಬ ಶಬ್ಧಾರ್ಥಧ್ವನಿಯು ನನ್ನಜ್ಞಾಪಕಕ್ಕೆ ಬಂತು.
ಹೌದು! ಜೀವಿಗಳೆಲ್ಲ ಅನ್ನ, ನೀರು, ಗಾಳಿ, ಬೆಂಕಿ, ನೆಲ ಮೂಲಕ ಬದುಕು ಮಾಡುತ್ತವೆ. ಮೂಲ ವಸ್ತಗಳೆಲ್ಲ ಇದೇ ಬಗೆ. ಎಲ್ಲ ವಿದ್ಯಾಭ್ಯಾಸದ ಖರ್ಚುಗಳಿಗೂ ಅನ್ವಯಿಸಿ, ಅನಂತರ ವೃತ್ತಿಯನ್ನು ಪಡೆಲು ಲಕ್ಷಿö್ಮಯನ್ನುಕುಣಿಸುತ್ತಲೇಇರಬೇಕು.ಇದುಸಾಮಾನ್ಯರಿಗೆ ನೀಗುವ ಮಾತೇಅಲ್ಲ. ಆದರೆ ಹೋಟೆಯೊಳಗಿನ ಕಿಚ್ಚಿನಿಂದಜೀವಒತ್ತೆಇಟ್ಟು, ದುಡ್ಡುಚೆಲ್ಲಿ ವ್ಯಾಸಂಗ ಮಾಡಿಸಿದರೆ, ಅವನು ಪದವೀಧರನಾಗುವಷ್ಟರಲ್ಲಿ ಸಂಬಂಧವಾಗಿ, ಖರ್ಚಾದದುಡ್ಡನ್ನು ಹೇಗೆ ಬೇರೆಯವರಿಂದ ಪಡೆದು ಕೊಳ್ಳಬಹುದುಎಂಬ ಬಗ್ಗೆಯೇಚಿಂತಿಸುತ್ತಾನೆ. ಆಗ ಭ್ರಷ್ಟಾಚಾರವುದೈತ್ಯವಾಗಿಕುಣಿಯುತ್ತದೆ.ತಾನುಖರ್ಚು ಮಾಡಿಕೊಂಡಎರಡರಷ್ಟಾದರೂ ಗಳಿಸಬೇಕೆಂಬ ಅತ್ಯಾಶೆ ಬೆಳೆಯುತ್ತಲೇ ಇರುತ್ತದೆ.

ಆದರೆ ದಾಹವು ಬಾರದಂತೆ, ಸಹಜವಾಗಿ ಶಿಕ್ಷಣವು ಎಲ್ಲರ ಬದುಕಿಗೂ ಪ್ರಾಣವಾಯುವಾಗಿ ಸಂಚರಿಸಬೇಕಾದರೆ, ಜನ್ಮವೆತ್ತ ಮಗುವಿಗೆ ಎಲ್ಲ ಸ್ತರಗಳಲ್ಲಿಯೂ ವಿದ್ಯೆಯು ಸಹಜವಾಗಿ, ದುಡ್ಡಿನ ಹೊರೆಯಿಲ್ಲದೆ, ಉಚಿತವಾಗಿದೊರೆಯಬೇಕು. ಮಗುವು ಹೊಣೆಹೊತ್ತ ಮನುಷ್ಯನಾದ ಮೇಲೆ ಕೇವಲ ಸೇವಾ ಮನೋಭಾವನೆಯಿಂದತನ್ನ ವೃತ್ತಿಯನ್ನು ನಡೆಸುತ್ತಾನೆ. ತನ್ನ ಬದುಕಿಗೆ ಎಷ್ಟು ಹಾಸಲು ಬೇಕೋ ಅಷ್ಟೆÃ ಮಿತಿಯಲ್ಲಿದ್ದು, ತನ್ನ ಪರಿಸರಕ್ಕೆ, ತನ್ನಕ್ಷೆÃತ್ರಕಾರ್ಯಕ್ಕೆ ನ್ಯಾಯಒದಗಿಸುತ್ತಾನೆ, ಅದಕ್ಕಾಗಿಒಟ್ಟಾರೆಯಾಗಿಜನ್ಮವೆತ್ತಿದಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ನೀಡುವಜವಾಬ್ದಾರಿ ಸರ್ಕಾರವೇ ಹೊತ್ತುಕೊಳ್ಳಬೇಕು. ಯಾವ ಬಗೆಯ ತಾರತಮ್ಯಗಳಿಲ್ಲದೆ, ಗುರುಕುಲ ಮಾದರಿಯಲ್ಲಿ ಶಿಕ್ಷಣ ಪ್ರದಾನವಾದರೆ, ಅಂತಹ ಪ್ರಜೆಎಲ್ಲಿಯೂ ಭ್ರಷ್ಟಾಚಾರಕ್ಕೆ ಇಳಿಯಲು ಸಾಧ್ಯವಿಲ್ಲ. ಅಂತಹ ಪ್ರಜೆಗಳು, ಸರ್ಕಾರವನ್ನು ನಡೆಸುವ ಪ್ರತಿನಿಧಿಗಳು, ಸರ್ಕಾರೀ ಸೇವೆಯಲ್ಲಿರುವವರುಒಂದುಗುಂಡು ಸೂಜಿಯಷ್ಟಾದರೂ ಭ್ರಷ್ಟಾಚಾರಕ್ಕೆಎಡೆಕೊಡದೆ ಸದಾಚಾರಿಗಳಾಗುತ್ತಾರೆ.
ಪ್ರಜಾ ಪ್ರಭುತ್ವದ ಕಾಲದಲ್ಲಿ, ಯಥಾಪ್ರಜಾತಥಾಪ್ರಜಾಪ್ರತಿನಿಧಿಎಂದಿರಬೇಕು, ಪ್ರಜಾಪ್ರತಿನಿಧಿಗಳು ಯಾವುದೇರೀತಿಯ ಸಂಚು ಮಾಡುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.ಅದರ ಪ್ರತಿಬಿಂಬವೇ ಲೋಕಸಭೆ ಮೊದಲಾದುವುಗಳನ್ನು ನಡೆಸುವ ಸರಕಾರ ಪ್ರಭುತ್ವ !ಇದು ಪ್ರಜಾಪ್ರಭತ್ವದ ವಿರುದ್ಧಅರ್ಥಇದರ ಭೀಭತ್ಸತೆಯನ್ನುಕಾಣಬೇಕಾದರೆ, ಇಂದಿನ ಚುನಾವಣೆಗಳು ನಡೆಯುವರೀತಿಯನ್ನು ನೆನೆಸಿಕೊಂಡರೆ ಸಾಕು!

ಅದರ ಸತ್ಯಸ್ವರೂಪವು ಅಂಗಾಲಿನಿಂದ ನೆತ್ತಿಯವರೆಗೆಉರಿಯನ್ನುಂಟುಮಾಡುತ್ತದೆ. ಪ್ರಜಾಪ್ರಭುತ್ವದ ಹೆಸರಲ್ಲಿ ಪ್ರಜೆಗಳಿಗೆ ಅಪಮಾನ ಮಾಡುವುದು ಸಾಧುವಲ್ಲ.ಅದಕ್ಕಾಗಿ ಮುಂದೆ ಬರುವ ಸರ್ಕಾರಗಳು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿತರ-ತಮಭಾವವಿಲ್ಲದೆ, ಜನತೆಗೆ ಸುಭಿಕ್ಷೆ ತರಬೇಕಾದರೆ, ಎಲ್ಲ ಮಟ್ಟದವರೆಗೆ ಎಲ್ಲರಿಗೂ ಉಚಿತ ಎಂದರೆ ಯಾವ ತರಹದ ಶುಲ್ಕ, ಕಾಣ್ಕೆಗಳಿಲ್ಲದೆ ಶಿಕ್ಷಣ ನೀಡಿದರೆ, ಕೃಷಿ, ಆರೋಗ್ಯ, ಸ್ವಾಭಿಮಾನ, ಸ್ವಾವಲಂಬನೆಗಳು ಸಮೃದ್ಧಿಯಾಗುತ್ತವೆ.

ಆಗ ಕೋಟಿಜನ ಸಂಖ್ಯೆಯೆಲ್ಲ ಸದಾಚಾರದಿಂದ, ವಿನಯ ಸಂಪನ್ನರಾಗಿ, ಸಂವಿಧಾನಾತ್ಮಕವಾಗಿ ಬದುಕು ಮಾಡಿಕೊಳ್ಳುತ್ತಾರೆ.ಏಕೆಂದರೆಅನೀತಿಯು ಬಡ್ಡಿ ಸಹಿತಉರಿದುಹೋಗಿ, ಕೇವಲ ನೀತಿ ಬದ್ಧ ಬದುಕು ಸರ್ವೇಸಾಮಾನ್ಯವಾಗುತ್ತದೆ. ಆಗ ಸುಜಲಾಂ, ಸುಫಲಾಂ, ಮಲಯದ ಶೀತಲಾಂ, ಸಸ್ಯಶ್ಯಾಮಲಾಂ- ಹೀಗೆ ದೇಶದಲ್ಲಿ ಸದಾ ನಿತ್ಯೊತ್ಸವ !ಇದನ್ನೆಲ್ಲ ಸಫಲಗೊಳಿಸಲು ೨೦೧೯-೨೦ ಬಜೆಟ್ಟಿನಲ್ಲಿ ಸಂಸತ್ತು ವಿಧಾನ ಮಂಡಳಗಳು ಸರ್ವತ್ರ, ಸರ್ವರಿಗೆಲ್ಲಉಚಿತ ಶಿಕ್ಷಣಕ್ಕೆ ಮಣೆಹಾಕಬೇಕು, ಇಲ್ಲದೆ ಹೋದಲ್ಲಿಪುಣ್ಯಕೋಟಿಭಾರತವುದುಷ್ಟ ಹೆಬ್ಬುಲಿಗಳಅಟ್ಟಂಅರಣ್ಯವಾದೀತು!
ಭ್ರಷ್ಟಾಚಾರವೇ ಶಿಷ್ಟಾಚಾರವಾದೀತು !ಎಚ್ಚರ !!

    

 


Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought