Chania

ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ
-ಲಕ್ಕ್ಷೀಶ ಕಾಟುಕುಕ್ಕೆ

 

                           `ಮಾನಸ ಸರೋವರ’ಎಂಬ ಹೆಸರಿನಲ್ಲೆ ಅವ್ಯಕ್ತವಾದ ಆಕರ್ಷಣೆಯಿದೆ. ಸನಾತನ ಭಾರತೀಯರು ಅತೀವವಾಗಿ ಗೌರವಿಸುವ; ಪರಶಿವನ ಆ ವಾಸಸ್ಥಾನವಾದ ಕೈಲಾಸಗಿರಿಯ ಮಗ್ಗುಲಿನಲ್ಲೆ ಇರುವ ವಿಶಾಲವಾದ ಮಾನಸ ಸರೋವರ ಜಗತ್ತಿನ ವಿಸ್ಮಯಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ. ಸ್ಫಟಿಕದಂತೆ ತಿಳಿಯಾಗಿ ಕಾಣಿಸುವ ಜಲರಾಶಿಯ ಬಣ್ಣವು ಬಿಸಿಲಿನ ಪ್ರಖರತೆಗನುಗುಣವಾಗಿ ಬಣ್ಣ ಬದಲಾಯಿಸುವ ಅಚ್ಚರಿಯ ಪುಳಕದ ಅನುಭವ ಬಣ್ಣನೆಗೆ ನಿಲುಕದ್ದು.

                           ಸ್ಕಂದ ಪುರಾಣದಲ್ಲಿ ಉಲ್ಲೆಖಿಸಲ್ಪಟ್ಟಂತೆ ಶಂಕರನ್ನು ನೆಲೆಗೊಂಡಿರುವ ಪ್ರದೇಶವೇ ಕೈಲಾಸಗಿರಿ. ಮಹಾಮಾತೆ ಪಾರ್ವತಿ, ಸುಬ್ರಹ್ಮಣ್ಯ-ಗಣೇಶರೆಂಬಕುಮಾರರು, ಅಪಾರ ಸಂಖ್ಯೆಯ ಗಣಗಳೊಡನೆ ಶಿವನು ನೆಲೆಸಿರುವ ಕಾರಣ ಅದು ಭಾರತೀಯರಿಗೆಲ್ಲ ಪರಮ ಪವಿತ್ರ ನೆಲೆಯಾಗಿದೆ.ಪರಶಿವನು ಹಾಗೂ ದೇವತೆಗಳ ಒಡೆಯನಾದದೇವೇಂದ್ರನುಕೂಡಾ ಆಗಾಗ ಹಂಸಗಳ ರೂಪತಾಳಿ ಮಾನಸ ಸರೋವರದಲ್ಲಿ ಈಜಾಡುತ್ತಾ ವಿಹರಿಸುವಕಾರಣ, ಸರೋವರದ ನೀರು ಪರಮಪವಿತ್ರವಾದದ್ದೆಂದು ನಂಬಲಾಗಿದೆ.

                           ಪ್ರತಿವರ್ಷವೂ ಸಾವಿರಾರುಯಾತ್ರಿಕರು ಈ ಸರೋವರವನ್ನುಕಂಡು ಸಂತಸಪಡುತ್ತಾರೆ.ಕಠಿಣತರವಾದ ಬೆಟ್ಟದದಾರಿಯನ್ನು ಕ್ರಮಿಸಿ, ಮೈನಡುಗಿಸುವ ಚಳಿಯನ್ನೂ ಮರೆತು, ವಿಶಾಲವಾದ ತಿಳಿನೀರಿನ ದರ್ಶನದಿಂದ; ಪವಿತ್ರಜಲದ ಸ್ನಾನದಿಂದ ಪುಳಕಿತರಾಗುತ್ತಾರೆ.ಬದುಕುಸಾರ್ಥಕವಾದಧನ್ಯತಾಭಾವದಿಂದ ಮರಳುತ್ತಾರೆ.

ಉಗಮದ ಹಿನ್ನೆಲೆ
                           ಸೃಷ್ಟಿಕರ್ತನಾದ ಬ್ರಹ್ಮದೇವನ ಮನಸ್ಸಿನಿಂದ ಹುಟ್ಟಿದಕಾರಣಕ್ಕೆ ಈ ಸರೋವರಕ್ಕೆ ಮಾನಸ ಸರೋವರ ಎಂಬ ಹೆಸರು ಬಂದಿತು.ದೇವತೆಗಳುಅದರಲ್ಲಿ ಪ್ರತಿನಿತ್ಯ ಸ್ನಾನಮಾಡುತ್ತಿದ್ದರು ಎಂಬ ನಂಬಿಕೆಯಿದೆ. ಬೆಳಗಿನ ಜಾವ ೩ ಗಂಟೆಯಿಂದ ೫ ಗಂಟೆಯ ನಡುವೆಬರುವ ಬ್ರಾಹ್ಮಿÃಮುಹೂರ್ತದಲ್ಲಿ ಮಾನಸ ಸರೋವರದ ನೀರಲ್ಲಿ ಸ್ನಾನ ಮಾಡುವುದುಅತ್ಯಂತ ಶ್ರೆಷ್ಠವೆಂದು ಹೇಳಲಾಗುತ್ತಿದೆ.


                           ಪುರುಷ-ಪ್ರಕೃತಿ; ಶಿವ-ಶಕ್ತಿ ಸಮ್ಮಿಲನದಿಂದಏರ್ಪಡಿಸುವ ಸಚ್ಚಿದಾನಂದ (ಸತ್+ಚಿತ್+ಆನಂದ) ಕೇಂದ್ರವೂ ಮಾನಸ ಸರೋವರವೇಆಗಿರುವುದರಿಂದಅದಕ್ಕೆ ವಿಶೇಷ ಮಹತ್ವವೂಇದೆ.ಸಮುದ್ರ ಮಟ್ಟಕ್ಕಿಂತ ೪೫೬೦ಮೀ.ಎತ್ತರದಲ್ಲಿರುವ ಕೈಲಾಸ ಪರ್ವತದ ಸೊಬಗೇ ಅದ್ಭುತವಾದದ್ದು.ಅದರ ಬುಡದಲ್ಲಿ ಸುಮಾರಿ ೩೨೦ ಚದರ ಕಿ.ಮೀ. ವಿಸ್ತಾರವಾಗಿ ಹಬ್ಬಿಕೊಂಡಿರುವ ಸರೋವರವು, ೯೦ ಕಿ.ಮೀ.ಸುತ್ತಳತೆಯನ್ನು ಹೊಂದಿದೆ. ಸಂಪೂರ್ಣಒಂದು ಸುತ್ತು ಬರಲು (ಪರಿಶ್ರಮ/ಪ್ರದಕ್ಷಿಣೆ) ಕನಿಷ್ಟ ೩ ಗಂಟೆಗಳುಬೇಕು.

                           ಮಾನಸಸರೋವರದ ನೀರನ್ನು ಸೇವಿಸುವುದರಿಂದಜೀವನದಲ್ಲಿ ಮಾಡಿದ ಪಾಪಗಳೆಲ್ಲವೂ ಪರಿಹಾರವಾಗಿ, ಆ ವ್ಯಕ್ತಿ ಮೋಕ್ಷಕ್ಕೆಅರ್ಹನಾಗುತ್ತಾನೆಂಬ ಪ್ರತೀತಿಯಿದೆ.ಜೂನ್ ತಿಂಗಳಿಂದ ಆಗಸ್ಟ್ ತಿಂಗಳ ನಡುವಿನ ಅವಧಿಯುಯಾತ್ರೆಗೆ ಪ್ರಶಸ್ತವೆಂದು ಹೇಳಲಾಗುತ್ತಿದೆ. ಪಾರ್ವತೀಕುಂಡವೆಂಬ ಪುಟ್ಟಕೆರೆಯೂಅತ್ಯಂತ ಪವಿತ್ರದ್ದಾಗಿದೆ.ಗಣೇಶನಿಗೆಆನೆಯತಲೆಜೋಡಿಸಲ್ಪಟ್ಟು ಮರುಜೀವ ಪಡೆದದ್ದುಇಲ್ಲಿಯೇಎಂದು ಪುರಾಣಗಳು ಹೇಳುತ್ತವೆ.

ಕೈಲಾಸ ಪರಿಶ್ರಮ
                           ಪವಿತ್ರವಾದ ಕೈಲಾಸ ಪರ್ವತದ ಪರಿಶ್ರಮವು ಸಾಹಸಮಯ ಹಾಗೂ ಆಸ್ತಿಕರಿಗೆ ಭಾವಪುಳಕದ ಕಾರ್ಯವಾಗಿದೆ. ಸುಮಾರು ೫೧ ಕಿ.ಮೀ. ಪ್ರದಕ್ಷಿಣೆಯ ಸಮಯದಲ್ಲಿ ತೊಳೆದ ಬೆಳ್ಳಿಯ ಕಿರೀಟ ತೊಡಿಸಿದಂತೆ ಕೈಲಾಸ ಪರ್ವತದ ಶಿಖರವು ಸೂರ್ಯನ ಬಿಸಿಲಲ್ಲಿ ಜಗಜಗಿಸುವುದನ್ನು ನೋಡಿದರೆಯಾರಾದರೂ ಬೆರಗಾಗಲೇಬೇಕು.ಬಿಸಿಲಿನ ಕಿರಣಗಳು ನಿರ್ದಿಷ್ಟಕೋನದಲ್ಲಿ ಕೈಲಾಸ ಗಿರಿಯ ಮೇಲೆ ಬಿದ್ದಾಗ, ಅದುಅಪ್ಪಟಚಿನ್ನದ ಬಣ್ಣದಲ್ಲಿ ಶೋಭಿಸುವುದನ್ನು ನೋಡಲುಎರಡುಕಣ್ಣೂ ಸಾಲವು.

                           ಜಗತ್ತಿನ ೭ ಅದ್ಭುತಗಳಿದ್ದಂತೆ, ಕೈಲಾಸ ಮಾನಸ ಸರೋವರದಲ್ಲೂ ೭ ಪ್ರಮುಖ ವಿಶೇಷತೆಗಳಿವೆ. ಪಶ್ಚಿಮದಲ್ಲಿ ಶತದ್ರು ನದಿ(ಸಟ್ಲೆಜ್); ಪೂರ್ವದಲ್ಲಿ ಬ್ರಹ್ಮ ಪುತ್ರಾ; ಉತ್ತರದಲ್ಲಿ ಸಿಂಧೂನದಿ ಹಾಗೂ ದಕ್ಷಿಣದಲ್ಲಿಕಾರ್ನಲಿ ನದಿಗಳಿಂದ ಸುತ್ತುವರಿದಿರುವ ಕೈಲಾಸ ಪರ್ವತ ಶ್ರೆಣಿಗಳು ಅತ್ಯಂತ ಮಹತ್ವದ ಶಿಖರಗಳಾಗಿವೆ.ಕೈಲಾಸಗಿರಿಯಆಗ್ನೆÃಯ ಭಾಗದಲ್ಲಿರುವ ಮಾನಸರೋವರದ ನೀರೇ ಹಿಮಾಲಯದಿಂದ ಉಗಮವಾಗುವ ಎಲ್ಲಾ ಪವಿತ್ರ ನದಿಗಳ ಮೂಲವೆಂದು ಹೇಳಲಾಗುತ್ತದೆ.

                           ಕೈಗಳಿಂದ ಬೊಗಸೆಯ ನೀರನ್ನೆತ್ತಿಕೊಂಡಾಗಅತ್ಯಂತ ಪಾರದರ್ಶಕ ಸಲಿಲ ಸರೋವರದಲ್ಲಿರುವಾಗದಡದಲ್ಲಿ ನೀಲವೂ; ಮಧ್ಯದಲ್ಲಿ ಹಸುರಾಗಿಯೂಕಾಣಿಸುವ ನೀರು ಸಮಯ ಸರಿದಂತೆ ಬೇರೆ ಬೇರೆ ವರ್ಣಛಾಯೆಗಳನ್ನು ಪ್ರತಿಫಲಿಸುತ್ತಿರುವುದು ಸೋಜಿಗದ ವಿಷಯವಾಗಿದೆ.ರಾತ್ರಿಯ ವೇಳೆ ತಿಂಗಳ ಬೆಳಕಿನಲ್ಲಿ ಅತ್ಯಂತ ಮನೋಹರವಾಗಿತೋರುತ್ತದೆ.

ರಮ್ಯ ಮನೋಹರ
                           ಕೈಲಾಸ ಶೀಖರಕ್ಕೆ ನಾಲ್ಕು ಮುಖಗಳಿವೆ. ನೀಲಮಣಿ, ಮಾಣಿಕ್ಯ, ಸ್ಫಟಿಕ, ಸುವರ್ಣಎಂದು ಈ ನಾಲ್ಕು ಮುಖಗಳನ್ನು ಕರೆಯುತ್ತಾರೆ.ಭೌಗೋಳಿಕವಾಗಿ ಇದು ಭೂಮಿಯಅಕ್ಷರೇಖೆಯಲ್ಲಿದ್ದು, ಅನೇಕ ಜಾಗತಿಕ ಚಲನಗಳಿಗೆ ಕೇಂದ್ರಸ್ಥಾನವಾಗಿದೆ.ಜೀವಿಗಳಿಗೆ ಅತ್ಯಂತಅಗತ್ಯವಾಗಿರುವ ಪ್ರಾಣವಾಯುವಿನ ಸಮತೋಲನವನ್ನು ಈ ಪ್ರದೇಶವು ನಿಯಂತ್ರಿಸುತ್ತದೆಎಂದು ಹೇಳುತ್ತಾರೆ.ಭೂಮಿಯಉತ್ತರಧ್ರುವ-ದಕ್ಷಿಣ ಧ್ರುವಗಳಲ್ಲಿ ಯಾವರೀತಿಯಗುರುತ್ವ ಮುಂತಾದ ನೈಸರ್ಗಿಕ ಶಕ್ತಿಗಳುಕಾರ್ಯ ನಿರ್ವಹಿಸುವುವೋ ಅದೇರೀತಿಯ ಪ್ರಕ್ರಿಯೆಗಳು ಕೈಲಾಸ ಪರ್ವತದಲ್ಲೂ ವರ್ತಿಸುವುದನ್ನುಅನುಭವಿಸಬಹುದಾಗಿದೆ.
ಆಲ್ಬರ್ಟ್ಐನ್‌ಸ್ಟೆನ್ ಪ್ರತಿಪಾದಿಸಿದ ಸಾಪೇಕ್ಷ ಸಿದ್ಧಾಂತದಂತೆ, ಎಡ-ಬಲ; ಮೇಲೆ-ಕೆಳಗೆ;ದೊಡ್ಡ-ಸಣ್ಣಎಲ್ಲವೂ ನಾವು ಯಾವುದನ್ನು ಮೂಲ ದ್ರವ್ಯವಾಗಿ ಇರಿಸಿಕೊಂಡಿದ್ದೆವೆಯೋ ಅದನ್ನು ಆಧರಿಸಿಯೇ ಇರುತ್ತವೆ. ಅದೇರೀತಿ ಈ ಪ್ರದೇಶದಲ್ಲಿ ಸಮಯವುಇತರ ಕಡೆಗಳಿಗಿಂತ ಬೇಗನೆ ಸರಿಯುವುದರಅನುಭವವಾಗುತ್ತದೆ.ಹಾಗೆಯೇಉಗುರು, ಕೂದಲುಗಳ ಬೆಳವಣಿಗೆಯ ವೇಗವು ಕೈಲಾಸದ ಪರಿಸರದಲ್ಲಿ ಹೆಚ್ಚಾಗಿರುವುದು ಯಾತ್ರಾರ್ಥಗಳ ಅನುಭವಕ್ಕೆ ಬಂದಿದೆ.

                           ಮಾನಸ ಸರೋವರವುದೈವೀಕ ಗುಣಗಳಿಂದ ಕೂಡಿರುವ ಸರೋವರವೆಂದೂ; ಅದರ ಸಮೀಪದಲ್ಲೆ ಇರುವ ರಾಕ್ಷಸ ಸರೋವರವು ದುಷ್ಟಶಕ್ತಿಗಳ ಆವಾಸಸ್ಥಾನವೆಂದೂ ಪ್ರತೀತಿಯಿದೆ. ಬೆಟ್ಟಗಳ ಸಣ್ಣ ಸರಣಿಯು ಇವುಗಳನ್ನು ಬೇರ್ಪಡಿಸುವುತ್ತವೆ. ಬದುಕಿನಲ್ಲಿ ಒಳಿತು-ಕೆಡುಕುಗಳ ಸಮ್ಮಿಶ್ರ ಪಾಕದಂತೆಅಲ್ಲಿಯೂ ಇದೆ.ನಾವು ಯಾವುದನ್ನು ಆಯ್ದುಕೊಳ್ಳುತ್ತೆವೆಯೋ ಅದರಆಧಾರದಲ್ಲಿ ಬದುಕಿನ ಪಥದರ್ಶನವಾಗುತ್ತದೆ.

ಬೃಹತ್ ಸ್ವಸ್ತಿಕ
                           ಪ್ರತಿದಿನವೂ ಸೂರ್ಯಾಸ್ತದ ಸಂದರ್ಭದಲ್ಲಿ ಕೈಲಾಸಪರ್ವತದ ಮೇಲೆ ಬೃಹದಾಕಾರದ ಸ್ವಸ್ತಿಕ ಚಿನ್ನೆಯು ಏರ್ಪಡುವುದು ಇನ್ನೊಂದು ಮಹತ್ವದ ಅಂಶವಾಗಿದೆ. ಕಾಮನ ಬಿಲ್ಲು ಏರ್ಪಟ್ಟಂತೆ ಇದೂ ಒಂದು ಪ್ರಾಕೃತಿಕವಾದ ವಿದ್ಯಮಾನವಾದರೂ, ಸೂರ್ಯನು ಭಗವಾನ್ ಶಂಕರನಿಗೆ ಸಲ್ಲಿಸುವ ಗೌರವವೆಂದು ಆಸ್ತಿಕರು ಭಾವಿಸುತ್ತಾರೆ.

                           ಕೈಲಾಸ ಪರ್ವತವನ್ನೆರುವ ಅನೇಕ ಪ್ರಯತ್ನಗಳು ಈವರೆಗೆ ವಿಫಲವಾಗಿದೆ. ಕೈಲಾಸ ಪರ್ವತದ ಸ್ಥಾನಗಳು ನಿರಂತರ ಬದಲಾಗುತ್ತಾ ಹೋಗುತ್ತಿರುವುದೇ ಇದಕ್ಕೆ ಕಾರಣ. ಶಿಖರದಲ್ಲಿ ಇವತ್ತು ಒಂದು ಕಡೆ ದಾರಿ ಇರುವಂತೆ ತೋರಿದರೆ ಕೆಲವುದಿನಗಳ ಬಳಿಕ ಆ ದಾರಿಯೇ ಮಾಯವಾಗಿರುತ್ತದೆ ಎಂದು ಪರ್ವತಾರೋಹಿಗಳು ಹೇಳುತ್ತಾರೆ.ಈ ವಿದ್ಯಮಾನಕ್ಕೆ ನಿಗದಿತ ಕಾರಣಗಳೇನೆಂಬುದು ಇನ್ನೂ ಸಂಶೋಧಿತವಾಗಿಲ್ಲ.

                           ಒಂದು ಹಂತದವರೆಗೂ ಬಸ್‌ಗಳಲ್ಲಿ ಸಾಗಿ; ಆ ಬಳಿಕ ಪಾದಯಾತ್ರೆಅಥವಾಕುದುರೆಯೇರಿಸಾಗುವುದುಒಂದುರೀತಿಯಾದರೆ ಹೆಲಿಕಾಫ್ಟರ್‌ಗಳಲ್ಲಿ ಕುಳಿತು ಸಮಗ್ರ ವಿಹಂಗಮ ನೋಟವನ್ನು ವೀಕ್ಷಿಸುವ ಸೌಲಭ್ಯವೂಇದೆ.ಸಾಹಸಿಗಳುಚಾರಣದ ಸಾಹಸಯಾತ್ರೆ ನಡೆಸುತ್ತಾರೆ.ಸಮುದ್ರ ಮಟ್ಟಕ್ಕಿಂತತುಂಬಾಎತ್ತರದಲ್ಲಿ ಕೈಲಾಸ ಪರ್ವತಹಾಗೂ ಮಾನಸ ಸರೋವರಗಳು ಇರುವುದರಿಂದ, ಅಲ್ಲಿಆಮ್ಲಜನಕದಕೊರತೆ; ವಿಪರೀತ ಚಳಿ; ಪ್ರತಿಕೂಲ ವಾತಾವರಣದ ಸಮಸ್ಯೆಗಳನ್ನು ಎದುರಿಸಬಲ್ಲ ಸಾಮರ್ಥ್ಯಇರುವವರುಚಾರಣ ನಡೆಸಬಹುದಾಗಿದೆ.

ರಾಷ್ಟ್ರದ ಶಿಖರ
                           ಭಾರತದೇಶದಉತ್ತರತುದಿಯಲ್ಲಿಎಂದರೆ ಶಿರೋಭಾಗದಲ್ಲಿ ನೆಲೆಸಿರುವ ಕೈಲಾಸ ಪರ್ವತ ಶ್ರೆಣಿಗಳು ಅನೇಕ ಸಾವಿರ ವರ್ಷಗಳ ಹಿಂದೆಇರಲೇಇಲ್ಲ. ಆ ಭಾಗದಲ್ಲಿಕಿರು ಸಮುದ್ರವಿತ್ತು.ಭಾರತವು ದ್ವಿಪವಾಗಿತ್ತು.ಕ್ರಮೇಣ ಭೂಮಿಯು ವಿಕಸನ ಹೊಂದುತ್ತಾ ಬಂದಂತೆ, ಭಾರತ ದ್ವಿಪವುಉತ್ತರಕ್ಕೆ ಸರಿಯುತ್ತಾ ಹೋಗಿ ಅಲ್ಲಿನ ಭೂಪ್ರದೇಶಕ್ಕೆಅಂಟಿಕೊಂಡಿತು.ಈ ಪ್ರಕ್ರಿಯೆಯಲ್ಲಿಅಪಾರವಾದಒತ್ತಡವು ಆ ಪ್ರದೇಶದಲ್ಲಿಏರ್ಪಟ್ಟಕಾರಣಒಂದಷ್ಟು ಭೂಮಿಯು ಮೇಲೆದ್ದು ಬಂದುದರ ಪರಿಣಾಮವೇ ಹಿಮಾಲಯದ ಪರ್ವತ ಶ್ರೆÃಣಿಗಳುಎಂಬುದಾಗಿಒಂದಷ್ಟು ಭೂವಿಜ್ಞಾನಿಗಳ ವಾದವೂಇದೆ.
                           ಸನಾತನ ಸಂಸ್ಕೃತಿಯು ಹಿಮಾಲಯದೊಡನೆಗಾಢವಾಗಿ ಬೆಸೆದುಕೊಂಡಿದೆ.ಜೀವನದಲ್ಲಿಒಮ್ಮೆಯಾದರೂ ಹಿಮಾಲಯವನ್ನೆರಬೇಕು, ಆಗಲೇ ಆತ್ಮದರ್ಶನವಾಗುತ್ತದೆ ಎಂಬ ಮಾತಿದೆ. ಬೃಹದಾಕಾರದ ಬೆಟ್ಟಗಳು; ಅಲ್ಲಲ್ಲಿ ಕೆಳಕ್ಕುರುಳಲು ಸಿದ್ಧವಾಗಿರುವಂತೆ ತೋರುವ ಬಂಡೆಗಳು ಹಾಗೂ ಹಿಮಗಡ್ಡೆಗಳು; ಅಪಾಯಕಾರೀ ಹಿಮಪಾತ; ಕೆಳಗೆ ದಿಟ್ಟಿಸಿದರೆ ನೆಲೆಕಾಣದಷ್ಟುಆಳ !ಈ ಸ್ಥಿತಿಯಲ್ಲಿ ಪರ್ವತವನ್ನೆರುತ್ತಿರುವ ವ್ಯಕ್ತಿಯಲ್ಲಿರುವ `ನಾನು!’ ಎಂಬ ಅಹಂಕಾರವು ನಶಿಸಿಹೋಗಿ, `ನಾನಲ್ಲ!....ಎಲ್ಲವೂ ನೀನೇ!!’ ಎಂದು ಮಾನವಾತೀತ ಶಕ್ತಿಯಅಧೀನದಲ್ಲಿ ನಮ್ಮನ್ನು ಒಪ್ಪಿಸಿಕೊಡುವುದೇ ಆತ್ಮದರ್ಶನ.

                           ಅಂತಹಜಾಗೃತಿಯನ್ನು ಮನಸ್ಸಿನೊಳಗೆ ಬಿತ್ತುವಂತಹ ಕೈಲಾಸ ಯಾತ್ರೆಯು ಪಾಪಹಾರಕವಲ್ಲದೆ ಮತ್ತಿನ್ನೆನು! ಅಹಂಕಾರತುಂಬಿದದೇಹ ಪಾಪಗಳಿಗೆ ಕಾರಣವಾಗುತ್ತದೆ.ವಿನಯತುಂಬಿದ ಹೃದಯಎಂದೂ ಪಾಪಗಳಿಗೆ ಪ್ರೆರಣೆ ನೀಡದು.
                           ಇಂತಹಆತ್ಮ ಶುದ್ಧಿಕರಣವೇ ಮೋಕ್ಷದೆಡೆಗೆ ಪ್ರಯಾಣ ಮಾಡುವ ಹಂತವಾಗಿದೆ.ಮನಸ್ಸನ್ನು ಶುದ್ಧಜಲದಂತೆ ನಿರ್ಮಲಗೊಳಿಸಿಕೊಂಡಾಗ ಅದುವೇ `ಮಾನಸ ಸರೋವರ’ವಾಗಿ ಪರಿವರ್ತನೆ ಹೊಂದುತ್ತದೆ.


Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought