Chania

ಬೇರೂರಿದ ಅಡಚಣೆಯ 
ಶ್ವಾಸಕೋಶ ರೋಗ ನಿಯಂತ್ರಣ ಹೇಗೆ?

- ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.



    ಶ್ವಾಸಕೋಶಗಳು, ಮೆದುಳು ಮತ್ತು ಹೃದಯ ಇವು ದೇಹದ ಪ್ರಮುಖ ಜೀವಾಂಗಗಳು. ಈ ಅಂಗಾಂಗಗಳಲ್ಲಿ ಯಾವುದಾದರೊಂದು ಅಂಗಾಂಗ ೩-೫ ನಿಮಿಷ ನಿರಂತರವಾಗಿ ಕಾರ್ಯಹೀನವಾದಲ್ಲಿ ಸಾವು ಖಚಿತ. ಶ್ವಾಸಕೋಶಗಳ ಆರೋಗ್ಯ ಅತಿ ಮುಖ್ಯವಾಗಿದ್ದು, ಇವುಗಳ ಆರೋಗ್ಯದ ಬಗ್ಗೆ ಸಮುದಾಯದಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆ ಶ್ವಾಸಕೋಶಗಳನ್ನು ವ್ಯಾಪಕವಾಗಿ ಕಾಡುವ “ಬೇರೂರಿದ ಅಡಚಣೆಯ ಶ್ವಾಸಕೋಶ ರೋಗ” (ಕ್ರಾನಿಕ್ ಅಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ - ಸಿಒಪಿಡಿ) ವನ್ನು ಪ್ರಧಾನವಾಗಿಟ್ಟುಕೊಂಡು ಪ್ರಪಂಚಾದ್ಯಂತ ನವೆಂಬರ್ ೨೧ ಅನ್ನು ಪ್ರತಿವರ್ಷ “ಬೇರೂರಿದ ಅಡಚಣೆಯ ಶ್ವಾಸಕೋಶ ರೋಗದ” ದಿನವನ್ನಾಗಿ ಅಚರಿಸಲು ಕರೆ ನೀಡಿದೆ. 
    ಬೇರೂರಿದ ಶ್ವಾಸಕೋಶದ ಅಡಚಣೆಯ ರೋಗ ಎಂದರೇನು? ಇದಕ್ಕೆ ಕಾರಣಗಳೇನು? ನಿಯಂತ್ರಣ ಹೇಗೆ ಎಂಬ ಬಗ್ಗೆ ಅರಿವು ಮೂಡಿಸುವ ಲೇಖನವಿದು.
       

ಶ್ವಾಸಕೋಶಗಳ ರಚನೆ ಮತ್ತು ಕಾರ್ಯ
ಎದೆಯ ಎಡ ಮತ್ತು ಬಲ ಭಾಗದಲ್ಲಿ ಎಡ ಮತ್ತು ಬಲ ಎಂಬ ಒಂದೊಂದು-ಒಟ್ಟು ೨ ಶ್ವಾಸಕೋಶ (ಲಂಗ್ಸ್) ಗಳಿದ್ದು, ಇವು ಅಸಂಖ್ಯಾತ ಗಾಳಿಗೂಡು (ಅಲ್ವಿಯೋಲೈ) ಗಳಿಂದ ರಚಿತವಾಗಿದ್ದು, ಇವುಗಳಿಗೆ ಮೂಗಿನ ಮೂಲಕದ ಉಸಿರುನಾಳ ವ್ಯವಸ್ಥೆ (ಏರ್‌ವೇಸ್)ಯಿಂದ ಗಾಳಿ ಸರಬರಾಜಾಗುತ್ತದೆ. ಗಾಳಿಗೂಡುಗಳು ಶ್ವಾಸಕೋಶಗಳ ಪ್ರಮುಖವಾದ ಘಟಕಗಳಾಗಿದ್ದು, ಇವುಗಳ ಹೊರಮೈ ಹೊರಗಿನಿಂದ ರವಾನಿಸಲ್ಪಟ್ಟ ಗಾಳಿಯ ಜೊತೆಗೆ ಮತ್ತು ಒಳಮೈ ಶ್ವಾಸಕೋಶದ ರಕ್ತನಾಳಗಳ ಜೊತೆಗೆ ನಿಕಟ ಸಂಪರ್ಕವನ್ನು ಹೊಂದಿದ್ದು, ಇವುಗಳಲ್ಲಿನ ಗಾಳಿಯಲ್ಲಿರುವ ಆಮ್ಲಜನಕ ರಕ್ತಕ್ಕೂ ಮತ್ತು ರಕ್ತನಾಳಗಳಲ್ಲಿರುವ ಕಾರ್ಬನ್‌ಡೈ ಆಕ್ಸೆಡ್ ಗಾಳಿಗೂಡುಗಳಿಗೂ ಸ್ಥಾನಪಲ್ಲಟಗೊಳ್ಳುತ್ತವೆ. 
    ಪ್ರತಿಯೊಂದು ಗಾಳಿಗೂಡು ರಚನಾತ್ಮಕವಾಗಿ ಮತ್ತು ಕಾರ್ಯಾತ್ಮಕವಾಗಿ ಪ್ರತ್ಯೆಕ ಘಟಕವಾಗಿದ್ದು, ಒಂದು ಗಾಳಿಗೂಡು ಮತ್ತೊಂದರಿಂದ ವಿಭಜಕ ರಚನೆಯಿಂದ ಪ್ರತ್ಯೆಕಿಸಲ್ಪಟ್ಟಿದೆ. ಗಾಳಿಗೂಡುಗಳು ಶ್ವಾಸಕೋಶಗಳ ಕಾರ್ಯಸ್ಥಾನಗಳಾಗಿದ್ದು, ಇವು ಅತಿ ಸೂಕ್ಷö್ಮವಾದ ವಿಶಿಷ್ಟರಚನೆಯಾದ ಗಾಳಿಗೂಡಿನ ಪದರದಿಂದ (ಅಲ್ವಿಯೊಲಾರ್ ಮೆಂಬ್ರೆನ್) ಆವೃತವಾಗಿದ್ದು, ಹಿಗ್ಗುವ ಮತ್ತು ಕುಗ್ಗುವ ಗುಣವುಳ್ಳ ಇಲ್ಯಾಸ್ಟಿಕ್ ಅಂಗಾಂಶ ದಿಂದ ರಚಿತವಾಗಿವೆ. 
ಉಚ್ಛಾಸದಲ್ಲಿ ಇವು ಹಿಗ್ಗಿ, ಹೊರ ಬರುವ ಗಾಳಿಯನ್ನು ಸ್ವಿಕರಿಸುತ್ತವೆ. ನಿಶ್ವಾಸದಲ್ಲಿ ಇವು ಕುಗ್ಗಿ ಅವುಗಳಲ್ಲಿರುವ ಗಾಳಿ ಯನ್ನು ಹೊರದೂಡುತ್ತವೆ. 
    ಗಾಳಿಗೂಡುಗಳು ಆಮ್ಲಜನಕ ಮತ್ತು ಕಾರ್ಬ ನ್‌ಡೈ ಆಕ್ಸೆಡ್‌ಗಳ ಸ್ಥಾನ ಪಲ್ಲಟದ ಘಟಕಗಳು. ಶ್ವಾಸ ಕೋಶಗಳ ಕಾರ್ಯದೇಹಕ್ಕೆ ಆಮ್ಲಜನಕವನ್ನು ಸರಬರಾಜು ಮಾಡುವುದಲ್ಲದೆ ದೇಹದಿಂದ ವಿಷಾಮ್ಲ ಇಂಗಾಲದ ಡೈ ಆಕ್ಸೆಡನ್ನು ಹೊರ ಹಾಕುವುದಾಗಿದೆ.
 

ಉಸಿರಾಂಗದ ಗಾಳಿ ರವಾನೆ ವ್ಯವಸ್ಥೆ (ರೆಸ್ಪಿರೇಟರಿ ಏರ್‌ವೇಸ್) 
ಉಸಿರಾಂಗದ ಗಾಳಿರವಾನೆ ವ್ಯವಸ್ಥೆ ಗಾಳಿಗೂಡುಗಳಿಗೆ ಗಾಳಿಯನ್ನು ಹೊರಗಿನಿಂದ ಒಳಕ್ಕೆ ಮತ್ತು ಒಳಗಿನಿಂದ ಹೊರಕ್ಕೆ ರವಾನಿಸುತ್ತದೆ. ಗಾಳಿರವಾನಕ ವ್ಯವಸ್ಥೆ ಮೂಗಿನಿಂದ ಪ್ರಾರಂಭವಾಗಿ ಟ್ರಿಕಿಯಾಗೆ ಜೋಡಣೆಯಾಗಿ, ಎದೆ ಭಾಗದಲ್ಲಿ ಟ್ರೆಕಿಯಾ ಎಡ ಮತ್ತು ಬಲ ಬ್ರಾಂಕಸ್‌ಗಳಾಗಿ  ವಿಭಜನೆಗೊಂಡು, ಅನುಕ್ರಮವಾಗಿ ಎಡ ಮತ್ತು ಬಲ ಶ್ವಾಸಕೋಶಗಳಿಗೆ ಜೋಡಣೆಯಾಗುತ್ತವೆ. ಪ್ರತಿಯೊಂದು ಬ್ರಾಂಕಸ್ ಅನುಕ್ರಮವಾಗಿ  ಬ್ರಾಂಕೈ, ಬ್ರಾಂಕಿಯೋಲ್ ಆಗಿ ಕವಲೊಡೆದು, ಪ್ರತಿಯೊಂದು ಬ್ರಾಂಕಿಯೋಲ್ ಅಂತಿಮವಾಗಿ ಅಂತ್ಯದ ಬ್ರಾಂಕಿಯೋಲ್ ಅಗಿ ಆಯಾ ಗಾಳಿಗೂಡಿಗೆ ಜೋಡಣೆಯಾಗುತ್ತದೆ. 
 

ಗಾಳಿ ರವಾನಕ ವ್ಯವಸ್ಥೆ 
    ನಾಳದೋಪಾದಿಯಲ್ಲಿದ್ದು, ಈ ಉಸಿರು ನಾಳಗಳು ಮೃದು ಮಾಂಸಖಂಡಗಳು ಮತ್ತು ಮ್ಯೂಕಸ್‌ದ್ರವ ಸುರಿಸುವ ಮ್ಯೂಕಸ್ ಗ್ರಂಥಿಗಳಿಂದ ರಚಿತವಾಗಿವೆ. ಉಸಿರುನಾಳಗಳು ಉಚ್ಛಾಸ ಮತ್ತು ನಿಶ್ವಾಸದ ಸಮಯದಲ್ಲಿತೆರೆದಿರುತ್ತವೆ. ಉಚ್ಛಾಸ (ಇನ್‌ಸ್ಪಿರೇಷನ್)ದ ಸಮಯದಲ್ಲಿ ಗಾಳಿಗೂಡುಗಳು ಹಿಗ್ಗಿ ಗಾಳಿಯನ್ನು ಸ್ವಿಕರಿಸುತ್ತವೆ. ನಿಶ್ವಾಸದ  (ಎಕ್ಸ್ಪಿರೇಷನ್)ದ ಸಮಯದಲ್ಲಿ ಗಾಳಿಗೂಡುಗಳು ಕುಗ್ಗಿ ಗಾಳಿಯನ್ನು  ಹೊರದಬ್ಬುತ್ತವೆ. ಉಚ್ಛಾ÷್ವಸದ ಗಾಳಿಯಲ್ಲಿ ಆಮ್ಲಜನಕವು ಮತ್ತು ನಿಶ್ವಾಸದ ಗಾಳಿಯಲ್ಲಿ ಇಂಗಾಲದ ಡೈಆಕ್ಸೆöಡ್‌ಗಳಿರುತ್ತವೆ.
 

ಬೇರೂರಿದ ಅಡಚಣೆಯ ಶ್ವಾಸಕೋಶ ರೋಗ ಎಂದರೇನು?
ದೀರ್ಘಾವಧಿಯಲ್ಲಿ ಬ್ರಾಂಕೈ ಹಂತದ ಉಸಿರುನಾಳ ವ್ಯವಸ್ಥೆ, ನಿಶ್ವಾಸದಲ್ಲಿ ಸಂಕುಚಿತಗೊಂಡು, ಅಡಚಣೆಗೀಡಾಗಿ, ನಿಶ್ವಾಸದ ಸಮಯದಲ್ಲಿ ಗಾಳಿಗೂಡುಗಳಿಂದ ಗಾಳಿ ಹೊರ ಹೋಗದೆ ಗಾಳಿ ಗೂಡುಗಳಲ್ಲಿಯೇ ಶೇಖರಣೆಗೊಂಡು, ಅವುಗಳಲ್ಲಿನ ಒತ್ತಡವನ್ನು ಏರಿಸಿ, ಗಾಳಿಗೂಡುಗಳನ್ನು ಜಖಂಗೊಳಿಸುವ ಬೇರೂರಿದ ಕಾಯಿಲೆಯಿದು. ಉಚ್ಪಾ÷್ವಸದಲ್ಲಿ ಗಾಳಿಯ ಗಾಳಿಗೂಡುಗಳ ಒಳಬಂದು, ನಿಶ್ವಾಸದಲ್ಲಿ ಉಸಿರುನಾಳಗಳು ಅಡಚಣೆಯಾಗುವುದರಿಂದ, ಗಾಳಿ ಹೊರ ಹೋಗದೆ ಗಾಳಿಗೂಡುಗಳಲ್ಲಿ ಅಧಿಕಗಾಳಿ ಬಂಧಿತವಾಗುತ್ತದೆ.     
    ಗಾಳಿಗೂಡುಗಳಲ್ಲಿ ಗಾಳಿ ಹೊರ ಹೋಗದೆ ಅತಿಯಾಗಿ ಶೇಖರಣೆಯಾಗುವುದರಿಂದ ಗಾಳಿಗೂಡುಗಳು ಒತ್ತಡಕ್ಕಿಡಾಗಿ, ಅವು ಜಖಂಗೊಂಡು,  ಗಾಳಿಗೂಡುಗಳ ನಡುವಿನ ವಿಭಜಕ ಹರಿದು ಹೋಗಿ, ಒಂದು ಗಾಳಿಗೂಡು ಮತ್ತೊಂದು-ಮಗದೊಂದು ಗಾಳಿಗೂಡಿನ ಜೊತೆ ಸೇರಿಕೊಂಡು, ವಿಸ್ತಾರಗೊಂಡು, ಅಂತಿಮ ಹಂತದಲ್ಲಿ ಅವುಗಳಲ್ಲಿ ಅತಿಯಾದ ಗಾಳಿ ತುಂಬಿಕೆಯಾಗಿ, “ಗಾಳಿ ತುಂಬೇರಿಕೆ ಎದೆ“(ಎಂಫೈಸಿóಮಾ) ಕಾಯಿಲೆಯುಂಟಾಗುತ್ತದೆ. ಶ್ವಾಸಕೋಶಗಳಲ್ಲಿ ಅತಿಯಾಗಿ ಗಾಳಿ ಶೇಖರಗೊಂಡು ಶ್ವಾಸಕೋಶಗಳು ಅತಿಯಾಗಿ ಹಿಗ್ಗುವುದರಿಂದ ಎದೆಗಳು ಉಬ್ಬುತ್ತವೆ. 
    ಹಲವಾರು ಗಾಳಿ ಗೂಡುಗಳು ಸೇರಿ ಒಂದು ದೊಡ್ಡ ಗಾಳಿಗೂಡಾಗುತ್ತದೆ. ಇದನ್ನು “ಗಾಳಿ ತುಂಬೇರಿಕೆಯ ಬುಲ್ಲ” (ಎಂಫೈಸಿಮಟಸ್ ಬುಲ್ಲ) ಎನ್ನಲಾಗುತ್ತದೆ. ಇದು ಒಡೆದು, ಗಾಳಿ ಪ್ಲೂರಗೂಡನ್ನು ಸೇರಿ, “ಗಾಳಿ ತುಂಬಿದ ಎದೆ ಗೂಡು” (ನ್ಯೂಮೊಥ್ಯರ‍್ಯಾಕ್ಸ್) ಜಟಿಲತೆ ಉಂಟಾಗುವ ಸಾಧ್ಯತೆ ಇರುತ್ತದೆ. ಕಾಯಿಲೆ ಈ ತಲುಪಲು ಸುಮಾರು ೧೦ ರಿಂದ ೧೫ ವರ್ಷಗಳು ಬೇಕು.
    ಗಾಳಿಗೂಡುಗಳು ನಾಶ ಹೊಂದುವುದರಿಂz ಆಮ್ಲಜನಕ ಮತ್ತು ಇಂಗಾಲದ ಡೈಆಕ್ಸೆಡ್‌ಗಳ ಸ್ಥಾನಪÀಲ್ಲಟ ಕ್ರಿಯೆಗೆ ಧಕ್ಕೆಯಾಗಿ, ಅಂತಿಮವಾಗಿ ಉಸಿರಾಟದ ವಿಫಲತೆಯುಂಟಾಗಿ, ರಕ್ತದಲ್ಲಿ ಇಂಗಾಲದ ಡೈಆಕ್ಸೆಡ್ ಏರಿಕೆ ಮತ್ತು ಆಮ್ಲಜನಕದ ಕೊರತೆ ಉಂಟಾಗಿ “ಉಸಿರಾಟದ ವಿಫಲತೆ” (ರೆಸ್ಟಿರೇಟರಿ ಫೈಲ್ಯೂರ್) ಉಂಟಾಗುತ್ತದೆ.
 
ರೋಗ ಲಕ್ಷಣಗಳು
    ಮೊದ ಮೊದಲು ಹಲವಾರು ವರ್ಷಗಳ ಕಾಲ ಗಟ್ಟಿಕಫಯುಕ್ತಕೆಮ್ಮು ಕಾಣಿಸಿಕೊಂಡು ನಂತರ ಎದೆಯಲ್ಲಿ ಗುಂಯ್‌ಗುಂಯ್ ಶಬ್ದ ಉಂಟಾಗುತ್ತದೆ. ಕೆಲ ಕಾಲದ ನಂತರ ಅಂದರೆ ೫-೧೦ ವರ್ಷಗಳ ನಂತರ ನಡೆದಾಗ, ಓಡಿದಾಗ, ಮೆಟ್ಟಲು ಹತ್ತಿದಾಗ ಇತ್ಯಾದಿ ದೈಹಿಕ ಶ್ರಮ ಕೈಗೊಂಡಾಗ ದಮ್ಮು ಕಾಣಿಸಿಕೊಳ್ಳುತ್ತದೆ. ಸೋಂಕು ತಗುಲಿದ ಸಂದರ್ಭದಲ್ಲಿಜ್ವರ, ವಾಸನೆಯ ಹಸಿರುಮಿಶ್ರಿತ, ಹಳದಿ ಬಣ್ಣದಕಫ ಕಾಣಿಸಿಕೊಳ್ಳಬಹುದು. ಸುಸ್ತು, ಸಂಕಟ, ದಿನೇ ದಿನೇ ಹೆಚ್ಚಾಗುವ ದಮ್ಮುಗಳು ಉಂಟಾಗುತ್ತವೆ. 
 ಉಸಿರಾಟದ ವಿಫಲತೆಯಂಟಾದ ಸಂದರ್ಭದಲ್ಲಿ ರಕ್ತದಲ್ಲಿ ಕಾರ್ಬನ್ ಡೈಆಕ್ಸೆöÊಡ್ ಅಧಿಕವಾಗಿ, ರಕ್ತದಲ್ಲಿ ಆಮ್ಲಜನಕದ ಕೊರತೆಯುಂಟಾಗಿ ಬಾಯಿ, ನಾಲಿಗೆ, ತುಟಿ, ಕೈಕಾಲು ಬೆರಳುಗಳು ನೀಲಿ ಬಣ್ಣಕ್ಕೆತಿರುಗುತ್ತವೆ. ಇದನ್ನು “ನೀಲಿರೋಗ” (ಸೈನೋಸಿಸ್) ಎನ್ನಲಾಗುತ್ತದೆ. ಕ್ರಮೇಣ ಬಲ ಹೃದಯದ ಮೇಲೆ ಒತ್ತಡ ಅಧಿಕವಾಗಿ “ಬಲ ಹೃದಯದ ವಿಫಲತೆ” (ರೈಟ್ ಹಾರ್ಟ್ ಫೈಲ್ಯೂರ್) ಯುಂಟಾಗುತ್ತದೆ. ಶ್ವಾಸಕೋಶಗಳ ಕಾಯಿಲೆಯಿಂದುಂಟಾದ ಬಲಹೃದಯದ ವಿಫಲತೆಯನ್ನು “ಶ್ವಾಸಕೋಶದ ಹೃದ್ರೊÃಗ” (ಕಾರ್ ಪಲ್ಮನೇಲ್) ಎನ್ನಲಾಗುತ್ತದೆ.
     ಈ ಹಂತದಲ್ಲಿ ಕೈ ಕಾಲುಗಳ ಊತ, ನಿದ್ರಾಹೀನತೆ, ಈಲಿಯೂತ, ಕತ್ತಿನ ಅಶುದ್ಧ ರಕ್ತನಾಳದ ಉಬ್ಬಿಕೆ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಹಂತ ತಲುಪಿದ ಕಾಯಿಲೆಯನ್ನು ಪÀÇರ್ಣವಾಗಿ ವಾಸಿ ಮಾಡಲು ಸಾಧ್ಯವಿಲ್ಲ. ಇವರುಗಳಲ್ಲಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗಿದ್ದು, ಮೆದುಳಿನ ಲಕ್ವ, ಹೃದಯಾಘಾತ ಉಂಟಾಗಬಹುದು. 
ಶ್ವಾಸಕೋಶದ ಕ್ಯಾನ್ಸರ್ ಸಾಧ್ಯತೆ  ಇವರುಗಳಲ್ಲಿ ಹೆಚ್ಚು.
ಕಾರಣಗಳೇನು?
ಧೂಮಪಾನ
ಅಡುಗೆ ಒಲೆಯ ಹೊಗೆ
ಕಾರ್ಖಾನೆಗಳ ಹೊಗೆ
ಪೆಟ್ರೊಲಿಯಂ ಸುಡುವ ಹೊಗೆ
ಸೊಳ್ಳೆ ಬತ್ತಿ ಹೊಗೆ
ಸಗಣಿ ಸುಟ್ಟ ಹೊಗೆ
ವಾಯು ಮಾಲಿನ್ಯ
ವಂಶವಾಹಿನಿ ನ್ಯೂನತೆಯ ಆಲ್ಫಾ ಆ್ಯಂಟಿಟ್ರಿಪ್‌ಸಿನ್ ಕಿಣ್ವದ ಕೊರತೆ ಇತ್ಯಾದಿ
ಧೂಮಪಾನ
    ಧೂಮಪಾನದ ಹೊಗೆಯಲ್ಲಿ ಸುಮಾರು ೪೦೦೦ ರಾಸಾಯನಿಕ ವಸ್ತುಗಳಿವೆಯೆಂದು ಅಂದಾಜಿಸಲಾಗಿದೆ. ಧೂಮದಲ್ಲಿನ ರಾಸಾಯನಿಕಗಳು, ಮತ್ತಿತರ ರಾಸಾಯನಿಕಗಳು ಉಸಿರುನಾಳಗಳನ್ನು ಜಖಂಗೊಳಿಸಿ, ಅವುಗಳನ್ನು ನಿಶ್ವಾಸದ ಸಮಯದಲ್ಲಿ ಅಡಚಣೆಗೀಡು ಮಾಡುತ್ತವೆ. ಏರು ರಕ್ತಒತ್ತಡ, ಸಕ್ಕರೆ ಕಾಯಿಲೆ, ಹೃದ್ರೊಗ, ಮುಪ್ಪು ಇವು ಜೊತೆಗೂಡಿದ್ದಲ್ಲಿ ಕಾಯಿಲೆ ಮತ್ತಷ್ಟುಉಲ್ಬಣಿಸುತ್ತದೆ.
ಕಾಯಿಲೆಯ ದೃಢೀಕರಣ
    ಈ ಕಾಯಿಲೆ ಮತ್ತು ಅಸ್ತಮಾ ಎರಡೂ ಒಂದೇ ರೋಗ ಲಕ್ಷಣಗಳನ್ನು ಹೊಂದಿದ್ದು, ದೈಹಿಕ ಪರೀಕ್ಷೆ, ಎದೆಎಕ್ಸ್ರೇ ಮತ್ತು ಸ್ಪೆöÊರೋಮೀಟ್ರಿ ಪರೀಕ್ಷೆಗಳಿಂದ ಕಾಯಿಲೆಯನ್ನು ದೃಢೀಕರಿಸಿ ಕೊಳ್ಳಲಾಗುತ್ತದೆ.
 ಸ್ಟೆರೋಮಿಟ್ರಿ
    ಉಚ್ಛಾ÷್ವಸ ಮತ್ತು ನಿಶ್ವಾಸದ ಸಮಯದಲ್ಲಿ ಶ್ವಾಸಕೋಶಗಳಿಗೆ ಸರಬರಾಜಾಗುವ ಮತ್ತು ಹೊರಹೋಗುವ ಗಾಳಿ ಗಾತ್ರದ ಪ್ರಮಾಣವನ್ನು ಅಳೆದು, ಶ್ವಾಸಕೋಶದ ಕಾರ್ಯ ಸಾಮರ್ಥ್ಯವನ್ನು ತಿಳಿಯುವ ಪರೀಕ್ಷೆಯಿದು. ಬೇರೂರಿದ ಅಡಚಣೆಯ ಶ್ವಾಸಕೋಶ ರೋಗದಲ್ಲಿ ಉಸಿರುನಾಳಗಳು ನಿಶ್ವಾಸದ ಸಮಯದಲ್ಲಿ ಅಡಚಣೆಗೊಳ್ಳುವುದರಿಂದ ನಿಶ್ವಾಸದ ಸಮಯದಲ್ಲಿ ಹೊರ ಹೋಗುವ ಗಾಳಿಯ ಪ್ರಮಾಣ ಮತ್ತು ವೇಗ ಶಾಶ್ವತವಾಗಿ ಕಡಿಮೆಯಾಗುತ್ತದೆ. ಈ ಪರೀಕ್ಷೆಯಿಂದ "ಒಂದು ಸೆಕೆಂಡಿಗೆ ಹೊರಹೋಗುವರಭಸದ ನಿಶ್ವಾಸದ ಗಾಳಿ ಗಾತ್ರದ ಪ್ರಮಾಣ" (ಫೋರ್‌ಸ್ಡ್ಎಕ್ಸ್ಪಿರೇಟರಿ ವಾಲ್ಯೂಂ ಪರ್ ಸೆಕೆಂಡ್)ವನ್ನು ಅಳೆದು ಈ ಕಾಯಿಲೆಯನ್ನು ದೃಢೀಕರಿಸಿಕೊಳ್ಳಲಾಗುತ್ತದೆ.
    ಈ ಕಾಯಿಲೆಯಲ್ಲಿ ಉಸಿರುನಾಳಗಳ ಅಡಚಣೆ ಶಾಶ್ವತವಾಗಿರುವುದರಿಂದ ಶ್ವಾಸನಾಳ ಹಿಗ್ಗಕ ಔಷಧಗಳು (ಬ್ರಾಂಕೊಡೈಲೇಟರ‍್ಸ್)ಉಸಿರುನಾಳವನ್ನು ಗಣನೀಯವಾಗಿ ಹಿಗ್ಗಿಸಲಾಗದಿರುವುದರಂದ ಈ ಔಷಧಗಳನ್ನು ನೀಡಿದ ನಂತರಮಾಡಲಾಗುವ ಈ ಪರೀಕ್ಷೆಯಲ್ಲಿ "೧ ಸೆಕೆಂಡಿಗೆ ರಭಸದ ನಿಶ್ವಾಸದಲ್ಲಿ ಹೊರಹೋಗುವ ಗಾಳಿಗಾತ್ರದ ಪ್ರಮಾಣದಲಿ”್ಲ ಈ ಔಷಧಗಳನ್ನು ನೀಡದ ಮುಂಚಿನ ಫಲಿತಾಂಶಕ್ಕಿಂತ ಗಣನೀಯ ವ್ಯತ್ಯಾಸ ಕಂಡುಬರುವುದಿಲ್ಲ. ಆದರೆ ಅಸ್ತಮಾ ರೋಗಿಗಳಲ್ಲಿ ಶ್ವಾಸನಾಳ ಅಡಚಣೆ ತಾತ್ಕಾಲಿಕವಾದುದರಿಂದ ಔಷಧಗಳು ಶ್ವಾಸನಾಳವನ್ನು ಹಿಗ್ಗಿಸುವುದರಿಂದ ಔಷಧಗಳನ್ನು ನೀಡಿದ ನಂತರಒಂದು ಸೆಕೆಂಡಿಗೆ ರಭಸದ ನಿಶ್ವಾಸದಲ್ಲಿ ಹೊರಹೋಗುವ ಗಾಳಿಯ ಪ್ರಮಾಣ ಔಷಧಗಳನ್ನು ನೀಡುವುದಕ್ಕಿಂತ ಮುಂಚಿಗಿಂತ ಹೆಚ್ಚಾಗಿರುತ್ತದೆ. 
    ಅಸ್ತಮಾ ಮತ್ತು ಬೇರೂರಿದ ಶ್ವಾಸಕೋಶÀ ಅಡಚಣೆ ಶ್ವಾಸಕೋಶರೋಗವನ್ನು ಈ ಪರೀಕ್ಷೆಯಿಂದ ವಿಭಿನ್ನಿಸಿ ದೃಢೀಕರಿಸಿಕೊಳ್ಳಬಹುದು.
ಚಿಕಿತ್ಸೆ
ಕಾರಣಕಾರಕ ಅಂಶಗಳಿಂದ ದೂರವಿರಬೇಕು.
ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಎಂಫೈಸೀಮ ಸ್ಥಿತಿ ತಲುಪುವ ಮೊದಲೇಚಿಕಿತ್ಸೆ ಪಡೆದಲ್ಲಿ ಕಾಯಿಲೆ ಪೂರ್ಣ ವಾಸಿಯಾಗುತ್ತದೆ.
ಎಂಫೈಸೀóಮ ಹಂತ ತಲುಪಿದ ನಂತರ ಕಾಯಿಲೆ ವಾಸಿಯಾಗದೆ ಇರುವುದರಿಂದ ಜೀವನವಿಡೀ ವೈದ್ಯರ ಮೇಲ್ವಿಚಾರಣೆಯ ಚಿಕಿತ್ಸೆ ಅತ್ಯಗತ್ಯ.
ಉಸಿರುನಾಳ ಹಿಗ್ಗಕ ಔಷಧಗಳು (ಬ್ರಾಂಕೊಡೈಲೇಟರ‍್ಸ್) ಮತ್ತುಕಫ ಹೊರತೆಗೆಯುವ ಔಷಧಗಳು (ಏಕ್ಸ್ಪೆಂಕ್ಟರೆಂಟ್ಸ್) ಉಪಯೋಗಕಾರಿ.
ಸೋಂಕಿರುವ ಸಂದರ್ಭದಲ್ಲಿ ಸೂಕ್ಷö್ಮಜೀವಿ ನಿರೋಧಕ ಔಷಧಗಳು ಉಪಯುಕ್ತ.
ಬಲ ಹೃದಯದ ವಿಫಲತೆಯಿದ್ದಲ್ಲಿ ಹೃದಯದ ವಿಫಲತೆ ನಿವಾರಕ ಔಷಧಗಳು ಅವಶ್ಯಕ.
ಉಸಿರುನಾಳ ವ್ಯವಸ್ಥೆ ಮತ್ತು ಶ್ವಾಸಕೋಶಗಳನ್ನು ಪÀÅನಶ್ಚೆÃತನಗೊಳಿಸುವ ಉಸಿರಾಟದ ವ್ಯಾಯಾಮ (ಪಲ್ಮನರಿರಿಹ್ಯಾಬಿಲಿಟೇಷನ್) ಅತ್ಯಂತ ಉಪಯೋಗಕಾರಿ.
ಉಸಿರಾಟದ ವಿಫಲತೆಯಿರುವವರಿಗೆ ಮನೆಯಲ್ಲಿ ಆಮ್ಲಜನಕದ ಅವಶ್ಯಕತೆ ಅತ್ಯಗತ್ಯ.
ನ್ಯೂಮೋನಿಯ ಮತ್ತು ಇನ್‌ಫ್ಲುಯೆಂಜಾó ಲಸಿಕೆಗಳನ್ನು ಆಗಿಂದಾಗ್ಯೆ ತೆಗೆದುಕೊಳ್ಳಬೇಕು.

 ಅನ್ವೆಷಿತ ಹೊಸ ಶಸ್ತಕ್ರಿಯೆಗಳು
ಶ್ವಾಸಕೋಶಗಳ ಗಾತ್ರವನ್ನು ಕುಗ್ಗಿಸುವ ಶಸ್ತçಕ್ರಿಯೆ (ಲಂಗ್ ವಾಲ್ಯೂಂರಿಡಕ್ಷನ್ ಸರ್ಜರಿ)
ಬುಲ್ಲಾಇರುವವರಿಗೆ ಬುಲ್ಲಾತೆಗೆಕೆ ಶಸ್ತಕ್ರಿಯೆ (ಬುಲ್ಲೆಕ್ಟಮಿ)
ಅಂತಿಮ ಹಂತದವರಿಗೆ ಶ್ವಾಸಕೋಶಗಳ ನಾಟಿ ಉಪಯೋಗಕಾರಿ (ಲಂಗ್‌ಟ್ರಾನ್ಸ್ ಫ್ಲಾಂಟೇಷನ್).

ತಡೆಗಟ್ಟುವುದು ಹೇಗೆ?
ಈ ಕಾಯಿಲೆಯು ತಡೆಗಟ್ಟಬಹುದಾದ ಗಂಭೀರ ಸ್ವರೂಪದ ಶಾಶ್ವತ ಕಾಯಿಲೆಯಾಗಿದ್ದು, ಧೂಮಪಾನ ಮತ್ತಿತರ ವಾಯುಮಾಲಿನ್ಯಗಳಿಂದ ದೂರವಿದ್ದಲ್ಲಿ ಈ ಕಾಯಿಲೆ ಹತ್ತಿರ ಸುಳಿಯುವುದಿಲ್ಲ. ಮನುಷ್ಯ ತಾನಾಗಿಯೇ ಆಹ್ವಾನಿಸಿಕೊಳ್ಳುವ ಕಾಯಿಲೆ ಇದಾಗಿದ್ದು, ಈ ಕಾಯಿಲೆಯಿಂದುಂಟಾಗುವ ಗಂಭೀರ ಸ್ವರೂಪದ ಪರಿಣಾಮಗಳನ್ನು ಮೊದಲೇ ಅರಿತು, ಧೂಮಪಾನ ಮತ್ತಿತರ ವಾಯುಮಾಲಿನ್ಯದ ಗಾಳಿಯಿಂದ ದೂರವಿದ್ದಲ್ಲಿ ಈ ಕಾಯಿಲೆಯಿಂದ ಪಾರಾಗಬಹುದು.
 


Click here for subscription



Read more Articles..

ನೋಟಕ್ಕೆ ಅಮೇರಿಕಾ ಊಟಕ್ಕೆ ಕರ್ನಾಟಕ - ಪ್ರೊ.ಜಿ.ಎಚ್. ಹನ್ನೆರಡುಮಠ ಉಚಿತ ಶಿಕ್ಷಣ ನೀತಿಯೇ ಭ್ರಷ್ಟರ ನಿರ್ಮೂಲನಕ್ಕೆ ಮದ್ದು  - ಪ್ರೊ|| ವಸಂತ ಕುಷ್ಟಗಿ. ಎಂ.ಎ.ಡಿ.ಲಿಟ್ ಮಹಿಳೆ ಮತ್ತು ಸಂಗೀತ - ಡಾ॥ ವರದಾ ಶ್ರೀನಿವಾಸ
ಕನ್ನಡ ಸಂಸ್ಕೃತಿಯ ಹಿರಿಮೆ, ಗರಿಮೆ - ಡಾ.ಎಂ.ಚಿದಾನಂದಮೂರ್ತಿ ಇಂಗ್ಲಂಡಿನಲ್ಲೊಬ್ಬ ಇಂಡಿಯನ್  - ಪ್ರೊ||ಚಂದ್ರಶೇಖರ ಪಾಟೀಲ್. (ಚಂಪಾ) ಬೇರೂರಿದ ಅಡಚಣೆಯ  ಶ್ವಾಸಕೋಶ ರೋಗ ನಿಯಂತ್ರಣ ಹೇಗೆ? - ಡಾ|| ಎಸ್.ಪಿ.ಯೋಗಣ್ಣ, ಸುಯೋಗ್ ಆಸ್ಪತ್ರೆ, ಮೈಸೂರು.
ಕಲಿಯುವಉತ್ಸಾಹ ನಿಮ್ಮಲ್ಲಿದ್ದರೆ ಇಂತಹದಾರ್ಶನಿಕರೂ ಸಿಗುತ್ತಾರೆ - ಆರ್.ಟಿ.ವಿಠ್ಠಲಮೂರ್ತಿ ಬೆಂಗಳೂರು ಕಾಲ ಪುರುಷ ತ್ರಿನೇತ್ರನು ವಿಹರಿಸುವ ಮಾನಸ ಸರೋವರ -ಲಕ್ಕ್ಷೀಶ ಕಾಟುಕುಕ್ಕೆ ಮನೆಯಾಕೆಗೆ ಮಾತ್ರವಲ್ಲ ಮಕ್ಕಳಿಗೂ ವ್ಯವಹಾರ ಜ್ಞಾನ ತಿಳಿದಿರಲಿ – ವೈಲೇಶ್ ಪಿ.ಎಸ್. ಕೊಡಗು. 
ಕಣ್ಣಿದ್ದರೂ ಕಾರಣ ಕನ್ನಡ - ಕರುಣೇಶ್ ಕಡತನಾಳು.


Share your thought