Chania

ಬದಲಾವಣೆಯ ಗಾಳಿ 
ಭಾಗ-೨
ಬದಲಾವಣೆ:-ಯಾವುದೇ ರೀತಿಯ ಮಾನಸಿಕ / ನಡವಳಿಕೆ / ಕೆಲಸದ ವೈಖರಿಗಳಲ್ಲಿ ಕಾಣುವ ಸ್ಥಿತ್ಯಂತರ ಅಥವಾ ಒಟ್ಟಾಗಿ ಮಾನಸಿಕವಾಗಿ ಮತ್ತು ನಡವಳಿಕೆಗಳಲ್ಲಿ ಹಾಗೂ ಕೆಲಸದ ವೈಖರಿಗಳಲ್ಲಿ ಕಾಣುವ ಸ್ಥಿತ್ಯಂತರವನ್ನು ಬದಲಾವಣೆ ಎನ್ನಬಹುದು. ‘ಬದಲಾವಣೆ'ಗಳು ಅನಿವಾರ್ಯ ಮತ್ತು ಬದಲಾಗುತ್ತಿರುವುದು ‘ಚಲನ ಶೀಲತೆ' ಯ ಲಕ್ಷಣವೂ ಹೌದು.
   ಬದಲಾವಣೆ ಎನ್ನುವುದು ಆಂತರಿಕವಾಗಿ ಅಥವಾ ಬಾಹ್ಯದಿಂದಲೂ ಆಗಿರಬಹುದು.ಆಂತರಿಕವಾಗಿ ಆಗುವ ಬದಲಾವಣೆಯೂ ಒಂದು ಅರ್ಥದಲ್ಲಿ ಬಾಹ್ಯದಿಂದ ಪ್ರೇರೇಪಣೆಗೊಂಡಿದ್ದಾಗಿರುತ್ತದೆ.  
    ಸುಖಾ ಸುಮ್ಮನೆ ಯಾರೂ ಬದಲಾಗಲು ಬಯಸುವುದಿಲ್ಲ. ಹೌದು, ಏನಾದರೂ ಪ್ರಚೋದನಕಾರೀ ಅಂಶಗಳು ಎದುರಾದಾಗ ಮಾತ್ರ ಮನುಷ್ಯ ಬದಲಾವಣೆಯ ಹಾದಿ ತುಳಿಯುತ್ತಾನೆ. ಪ್ರಚೋದನಕಾರಿ ಅಂಶಗಳು ಬಹುತೇಕವಾಗಿ ಹೊರಗಿನ ಅಂಶಗಳಾಗಿಯೇ ಇರುತ್ತವೆ. ಆಂತರ್ಯದ ಅಂಶಗಳಾಗಿದ್ದರೂ  ಅವು ಸಹಾ ಹೊರಗಿನ ಪ್ರಚೋದನೆಯಿಂದಲೇ ಕೂಡಿರುತ್ತವೆ.
 ಬದಲಾವಣೆಗಳನ್ನು ಒಪ್ಪಿ ನಡೆದರೆ ನಾವು ನಿಂತ ನೀರಾಗುವುದಿಲ್ಲ.ಆದರೆ ಕೆಲವೊಮ್ಮೆ ಮತ್ತು ಕೆಲವು ಬದಲಾವಣೆಗಳಿಗೆ ಹೊಂದಿಕೊಳ್ಳುವುದು ಕಷ್ಟ ಸಾಧ್ಯ! ಇದಕ್ಕೆ ಕಾರಣಗಳು ಹಲವಾರು.
    ಹಿಂಜರಿಕೆ,
    ಇಷ್ಟವಿಲ್ಲದಿರುವುದು (Reluctant),
    ಸಾಧ್ಯತೆಯ ಅನುಮಾನ
    ಮತ್ತು ಇನ್ನಿತರೆ ಬಾಹ್ಯ ಕಾರಣಗಳು  
       ಉದಾಹರಣೆ ಹವಾಮಾನದ ಬದಲಾವಣೆ,ರಾಜಕೀಯ ಮತ್ತು ಸಾಮಾಜಿಕ ಸ್ಥಿತ್ಯಂತರಗಳು, ಕೌಟುಂಬಿಕ ಕಾರಣಗಳು, ತಂತ್ರಜ್ಞಾನ ಸಂಬಂಧಿಸಿದ ಬದಲಾವಣೆಗಳು
   ನೆನಪಿಡಿ: ಬದಲಾವಣೆ ಎನ್ನುವುದು ಒಂದು ಪ್ರಕ್ರಿಯೆ ಹೊರತು ಒಂದು ರಾತ್ರಿಯಲ್ಲಿ ಸಂಭವಿಸಿ ಹೋಗಬಹುದಾದ ಘಟನೆಯಲ್ಲ. `ಬದಲಾವಣೆ'ಗಳ ಬಗ್ಗೆ ಪ್ರತಿಕ್ರಿಯಿಸುವ ಮೊದಲು ಈ ಬದಲಾವಣೆಗಳು ಯಾವ ತರಹದ ಪರಿಣಾವನ್ನು ಬೀರಬಲ್ಲದು ಎನ್ನುವುದನ್ನು ವಿಷದ ಪಡಿಸಬೇಕಾಗುತ್ತೆ. ಬದಲಾವಣೆಗಳು ನಿರೀಕ್ಷಿತವಾಗಿರಬಹದು ಅಥವಾ ಅನಿರೀಕ್ಷಿತವೂ ಆಗಿರಬಹುದು. ಬದಲಾವಣೆಗಳು ನಮ್ಮ ಮೂಗಿನ ನೇರಕ್ಕೆ ಇರಬಹುದು ಅಥವಾ ಇರದೆಯೂ ಇರಬಹುದು.
     ಆಗ ನಮಗೆದುರಾಗುವುದೇ - 'ಇಷ್ಟವಿಲ್ಲದಿರುವುದು'.ಯಾವಾಗ ಬಯಸದೇ ಇದ್ದ ಬದಲಾವಣೆ ಎದುರಾಗುವುದೊ ಆಗ ಹೆಜ್ಜೆ ಎತ್ತಿ ಇಡಲೂ ಅಳುಕು ಶುರುವಾಗುತ್ತೆ. ಅದೇ - 'ಹಿಂಜರಿಕೆ'. ಈ 'ಹಿಂಜರಿಕೆ'ಯಿಂದಲೇ  - 'ಕೆಲಸ ಸಾಧ್ಯತೆಯ ಅನುಮಾನಗಳು' ಶುರುವಾಗುತ್ತವೆ. ಇವಿಷ್ಟು ಆಂತರಿಕವಾದ ಕಾರಣಗಳಾದರೆ ಇನ್ನು ಬಾಹ್ಯ ಕಾರಣಗಳು ಹೀಗಿರುತ್ತವೆ-
   ಉದಾಹರಣೆಗೆ ಒಬ್ಬ ವ್ಯಕ್ತಿಗೆ ಅಸ್ತಮಾ ತೊಂದರೆ ಇದೆ. ಆದರೆ ಆ ವ್ಯಕ್ತಿ ಅನಿವಾರ್ಯವಾಗಿ  ನಸುಕಿನ ವೇಳೆಯಲ್ಲಿ ಮನೆಯಿಂದ ಹೊರಟು ಕೆಲಸಕ್ಕೆ ತೊಡಗಬೇಕಾಗುತ್ತೆ.ಇದು ಹವಾಮಾನ ಬದಲಾವಣೆಯ ಪರಿಣಾಮ. ಹಾಗೆಯೇ ಯಾವುದೋ ಒಂದು ರಾಜಕೀಯ ರೀತಿ-ನೀತಿ ಇನ್ನೊಂದು ತೆರನಾದ ಬದಲಾವಣೆಯನ್ನು ಬಯಸಬಹುದು. ಇದೇ ರೀತಿ ಕೌಟುಂಬಿಕ ಕಾರಣಗಳು ಸಹಾ ಬದಲಾವಣೆಗೆ ಅಡ್ಡಿಯಾಗಬಹುದು.
   ಕೂಲಂಕಷವಾಗಿ ಗಮನಿಸಿದಾಗ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತೆ. ಅದೇನೆಂದರೆ ಬಾಹ್ಯ ಕಾರಣಗಳನ್ನು ನಿಯಂತ್ರಿಸಲು ನಮ್ಮಿಂದ ಕಷ್ಟ ಸಾಧ್ಯವೇ ಸೈ! ಆದರೆ ಆಂತರಿಕ ಕಾರಣಗಳನ್ನು ನಾವು ನಿಭಾಯಿಸ ಬಹುದು.ನೆನಪಿಡಿ 'ಬದಲಾವಣೆ' ಎನ್ನುವುದು ಒಂದು ಅನಿವಾರ್ಯ ಪ್ರಕ್ರಿಯೆ. ನಾವು ಬದಲಾವಣೆಗಳನ್ನು ಒಪ್ಪಿಕೊಂಡು ಸಾಗಲೇ ಬೇಕು, ಕೆಲವೊಮ್ಮೆ ಬದಲಾವಣೆಗಳು ಬಾಹ್ಯ ವಾತಾವರಣದಿಂದ ಪ್ರೇರಿತವಾಗಿರಬೇಕಿಂದಿಲ್ಲ. ನಮ್ಮೊಳಗಿನ ಮನಸ್ಥಿತಿಯಲ್ಲಿಯೂ ಬದಲಾವಣೆ ಬಯಸಬಹುದು.
        ಅಂದರೆ ಈಗಿನ ಪರಿಸ್ಥಿತಿಯನ್ನು ಗಮನಿಸಿದಾಗ ಬಹುತೇಕ ಕಂಪನಿಗಳು ವಾರಕ್ಕೆ ಐದು ದಿನಗಳ ಕೆಲಸವನ್ನು ನಿಗದಿ ಮಾಡಿವೆ.ಆದರೆ ಕೆಲವು ಸಂದರ್ಭಗಳಲ್ಲಿ ನಾವು ವಾರಕ್ಕೆ ಆರು ದಿನ; ಅಲ್ಲದೆ ವಾರಕ್ಕೆ ಏಳು ದಿನಗಳೂ ಕೆಲಸ ಮಾಡಬೇಕಾಗಿರುವ ಪರಿಸ್ಥಿತಿ ಎದುರಾಗಬಹುದು. ಆಗ ಪರಿಸ್ಥಿತಿಗೆ ವಿರುದ್ಧವಾಗಿ ಸಾಗುವುದು ಅನಿವಾರ್ಯ.  ಹಾಗಾಗಿ ನಮ್ಮ ಮನಸ್ಸನ್ನು ಶ್ರುತಿಗೊಳಿಸಿ, ನಾವು ಪರಿಸ್ಥಿತಿಗನುಗುಣವಾಗಿ ಕೆಲಸ ಮಾಡಬೇಕು.
ಗಮನಿಸಬೇಕಾದ ಅಂಶಗಳು:-
     ‘ಬದಲಾವಣೆ'ಗಳು ಅನಿವಾರ್ಯ ಮತ್ತು ಅದೇ ಚಲನಶೀಲತೆ
    ‘ಬದಲಾವಣೆ'ಗಳನ್ನು ಸಂದರ್ಭಕ್ಕೆ ತಕ್ಕಂತೆ ಅಳೆದು ತೂಗಿ ಒಪ್ಪಿಕೊಂಡು ನಡೆಯುವುದೇ ಜಾಣತನ
    ಕೆಲವು ವೇಳೆ ಬದಲಾವಣೆಗಳನ್ನು ಬಳಸಿಕೊಳ್ಳದೆ ಹೋದರೆ ನಾಶವಾಗಲಿಕ್ಕೂ ಸಾಧ್ಯ (ಉದಾಹರಣೆ: ಮೊದಲು ಟೈಪ್ ರೈಟರ್‌ಗಳಲ್ಲಿ ಕೆಲಸ ಮಾಡುತ್ತಿದ್ದವರು ಈಗಲೂ ಅದರಿಂದಲೇ ಅನ್ನ ಹುಟ್ಟಿಸುತ್ತೇವೆ ಎನ್ನುವುದು ತುಸು ಕಷ್ಟವೇ ಸೈ)


Click here for subscription



Read more Articles..

ಚಿತ್ರಗೀತನಾವರಣ - ಡಾ||ಡಿ.ಭರತ್ ವಿಕಸನ - ಧೀರೇಂದ್ರ ನಾಗರಹಳ್ಳಿ, ಬಳ್ಳಾರಿ ಪ್ರಕೃತಿ ಮತ್ತು ನಾವು  -  ಜಯಶ್ರೀರಾಜು,ಬೆಂಗಳೂರು
ಮಮತೆ ಬೆಳೆಸಿದ ಬದುಕು - ವ್ಯೆಲೇಶ್ ಪಿ . ಕೊಡಗು ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


Share your thought