Chania

ಪವಿತ್ರತೆಯಲ್ಲೇ ಆರೋಗ್ಯ ಭಾಗ್ಯ ನೀಡುವ 
ತುಳಸಿ

ತುಳಸಿ ಎಂದ ತಕ್ಷಣ ಮನದಲ್ಲಿ ಮೂಡುವ ಭಾವವೆಂದರೆ ಭಕ್ತಿ. ಭಾರತೀಯರ ಮನದಲ್ಲಿ ಆಳವಾಗಿ ಬೇರೂರಿದ ಗಿಡವೆಂದರೆ ತುಳಸಿ. ಬಹುಶಃ ಎಲ್ಲರೂ ತಮ್ಮ ಮನೆಯಂಗಳದ ಹಲವು ಗಿಡಗಳ ಪೈಕಿ ತುಳಸಿಯನ್ನೂ ಹಾಕಿರುತ್ತಾರೆ. ಈ ಗಿಡವನ್ನು ಎಲ್ಲ ಗಿಡಗಳಂತೆ ಪೋಷಿಸದೇ, ಅದಕ್ಕೆÃ ಆದ ಮಹತ್ವವನ್ನು ನೀಡಿ ಬೆಳೆಸುತ್ತಾರೆ.
    ಇದೇ ಕಾರಣ ಹಿಂದೂಗಳು ಇದನ್ನು ದೇವರೆಂದು ಪೂಜಿಸುವುದಾಗಿದೆ. ಹಿಂದೂಗಳು ಈ ಗಿಡವನ್ನು ದೇವರೆಂದು ಪೂಜಿಸಲು ಬೆಳೆಸಿದರೆ ಇತರೇ ಧರ್ಮದವರು ಇದನ್ನು ಒಂದು ಔಷಧೀಯ ಗಿಡವನ್ನಾಗಿ ಬೆಳೆಸುತ್ತಾರೆ. ತುಳಸಿ  ಗಿಡವನ್ನು ಪ್ರತಿನಿತ್ಯ ಪೂಜಿಸುವುದರಿಂದ ವಿಷ್ಣುವಿನ ಅನುಗ್ರಹವಾಗಿ, ಕಷ್ಟ ನಿವಾರಣೆಯಾಗಿ ಅದೃಷ್ಟ ನಮ್ಮದಾಗುತ್ತದೆ ಎಂದು ಹೇಳುತ್ತಾರೆ. 
      ತುಳಸಿ ಗಿಡವು ಮನೆಯ ಒಳಗಿನ ಹಾಗೂ ಹೊರಗಿನ ನಕಾರಾತ್ಮಕ ಶಕ್ತಿಯನ್ನು ತೊಲಗಿಸುತ್ತದೆ ಎನ್ನುತ್ತಾರೆ. ಯಾವುದೇ ದುಷ್ಟ ಶಕ್ತಿ ಮನೆಯ ಹತ್ತಿರವೂ ಸುಳಿಯದಂತೆ ಈ ಸಸ್ಯ ಮಾಡುತ್ತದೆ ಎಂದು ಹೇಳುತ್ತಾರೆ. ವೇದ, ಪುರಾಣಗಳಲ್ಲಿ ಈ ಸಸ್ಯದ ಸುತ್ತ ಹಲವಾರು ಕಥೆಗಳಿವೆ. ಈ ಗಿಡವನ್ನು ವೃಂದಾ ಎಂದೂ ಕರೆಯುತ್ತಾರೆ. ನಮ್ಮ ಹಿರಿಯರು ಹಲವಾರು ಗಿಡಗಳ ಪೈಕಿ ಈ ಗಿಡಕ್ಕೆÃ ಅತಿಯಾದ ಮಹತ್ವ ನೀಡಿದ್ದಾರೆಂದರೆ ಈ ಗಿಡದಲ್ಲಿ ಏನೋ ವಿಶೇಷತೆ ಇದ್ದೆÃ ಇರುತ್ತದೆ. ಅದೇನೆಂದು ತಿಳಿದುಕೊಂಡು, ನಾವೂ ಅದರಂತೆ ನಡೆದುಕೊಂಡರೆ ನಮ್ಮ ಮುಂದಿನ ಪೀಳಿಗೆಗೂ ಇದರ ಮಹತ್ವ ತಿಳಿಸಲು ಸಾಧ್ಯವಾಗುತ್ತದೆ. 
      ತುಳಸಿಗಿಡ ಅದೆಷ್ಟು ಪವಿತ್ರವೆಂದು ಪೂಜಿಸಲ್ಪಡುತ್ತದೆಯೋ ಅಷ್ಟೆÃ ಔಷಧೀಯ ಗುಣಗಳನ್ನೂ ಪಡೆದುಕೊಂಡು,  ಜನಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ತುಳಸಿ ಗಿಡ ಹೆಚ್ಚು ಬೆಳೆದಷ್ಟು ಶುದ್ದ ಆಮ್ಲಜನಕ ನೀಡಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತುಳಸಿಗಿಡ ಇರುವ ಜಾಗದಲ್ಲಿ ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ. ತುಳಸಿ ಎಲೆ ಸೇವನೆಯಿಂದ ರಕ್ತ ಶುದ್ದಿÃಕರಣಗೊಂಡು, ಹಲವಾರು ಚರ್ಮ ರೋಗಗಳು ಹೇಳ ಹೆಸರಿಲ್ಲದಂತಾಗುತ್ತದೆ.
       ಔಷಧೀಯ ಗಿಡವಾಗಿ ತುಳಸಿಯ ಬಳಕೆ; ಏಲಕ್ಕಿಪುಡಿ, ಶುಂಠಿರಸ ಮತ್ತು ತುಳಸಿ ಎಲೆಯ ರಸವನ್ನು ಸಮಪ್ರಮಾಣದಲ್ಲಿ ಸೇರಿಸಿ ಸೇವಿಸಿದರೆ ವಾಂತಿ ಸಮಸ್ಯೆ ದೂರವಾಗುತ್ತದೆ.
        ಹಲ್ಲು ನೋವು ಮತ್ತು ಒಸಡುಗಳಲ್ಲಿ ಊತ ಕಾಣಿಸಿಕೊಂಡಾಗ ೫-೬ ತುಳಸಿಎಲೆಯನ್ನು ಹಲ್ಲುನೋವಿರುವ ಭಾಗ ಅಥವಾ ಒಸಡು ಊದಿಕೊಂಡಿರುವಲ್ಲಿ ಇರಿಸಿದರೆ ಹಲ್ಲುನೋವು ವಾಸಿಯಾಗುತ್ತದೆ. ಹಾಗೂ ಊತವು ಕಡಿಮೆಯಾಗುತ್ತದೆ.
         ಕೆಮ್ಮು, ಜ್ವರದಿಂದ ಬಳಲುವವರು ತುಳಸಿರಸ, ಲವಂಗ ಮತ್ತು ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸೇರಿಸಿ ಸೇವಿಸಿದರೆ ಪರಿಹಾರ ಕಾಣಬಹುದು.
       ತುಳಸಿ ಎಲೆಯನ್ನು ಅರೆದು ಪೇಸ್ಟ್ ಮಾಡಿ ನಿಂಬೆರಸದೊಂದಿಗೆ  ಸೇರಿಸಿ ಲೇಪಿಸಿದರೆ ಹಲವಾರು ರೀತಿಯ ಚರ್ಮವ್ಯಾಧಿಗಳು ಬಹುಬೇಗನೇ ಗುಣವಾಗುತ್ತವೆ.
       ದೇಹ ದೌಬರ್ಲ್ಯದಿಂದ ಬಳಲುವವರು ತುಳಸಿ ಬೀಜದ ಪುಡಿ ಮತ್ತು ತುಳಸಿ ಗಿಡದ  ಬೇರನ್ನು ಒಣಗಿಸಿ ಮಾಡಿದ ಪುಡಿಯನ್ನು ಹಸುವಿನ ಹಾಲಿನೊಂದಿಗೆ ಸೇವಿಸಿದರೆ, ದೇಹ ದೌರ್ಬಲ್ಯ ಕಡಿಮೆ ಮಾಡಿ ದೇಹ ಸಾಮರ್ಥ್ಯ ಹೆಚ್ಚಿಸುತ್ತದೆ. ಪ್ರತಿದಿನ ತುಳಸಿ ಎಲೆಯನ್ನು ಸೇವಿಸುವುದರಿಂದ ಗ್ಯಾಸ್ಟಿçಕ್ ಸಮಸ್ಯೆ ದೂರವಾಗುತ್ತದೆ.
        ಹೀಗೆ ತುಳಸಿಯಲ್ಲಿರುವ ರೋಗ ನಿರೋಧಕ ಶಕ್ತಿಯಿಂದಾಗಿ ಇದು ಕೇವಲ ಪವಿತ್ರ ಗಿಡವಷ್ಟೆ ಅಲ್ಲ ಮನುಷ್ಯರಿಗೆ ದೈಹಿಕವಾಗಿ, ಮಾನಸಿಕವಾಗಿ ಸಾಮರ್ಥ್ಯವನ್ನು ನೀಡುವ ಮಹತ್ವದ ಗಿಡವಾಗಿ ಜನಮಾನಸದಲ್ಲಿ ನೆಲೆಯೂರಿದೆ.


Click here for subscription



Read more Articles..

ಚಿತ್ರಗೀತನಾವರಣ - ಡಾ||ಡಿ.ಭರತ್ ವಿಕಸನ - ಧೀರೇಂದ್ರ ನಾಗರಹಳ್ಳಿ, ಬಳ್ಳಾರಿ ಪ್ರಕೃತಿ ಮತ್ತು ನಾವು  -  ಜಯಶ್ರೀರಾಜು,ಬೆಂಗಳೂರು
ಮಮತೆ ಬೆಳೆಸಿದ ಬದುಕು - ವ್ಯೆಲೇಶ್ ಪಿ . ಕೊಡಗು ವೈದಕೀಯ - ಡಾ॥ಎಸ್.ಪಿ.ಯೋಗಣ್ಣ


Share your thought