Chania

ಸ್ತ್ರೀ ಸಮಾನತೆಯ ಹೆಸರಲ್ಲಿ ತನ್ನತನ ಮರೆಯಬಾರದು - ಪ್ರೇಮಾ ಭಟ್

                  ಪ್ರೇಮಾ ಭಟ್ ಓರ್ವ ಲೇಖಕಿಯಾಗಿ, ಸರ್ಕಾರಿ ಉದ್ಯೋಗಿಯಾಗಿ, ಆದರ್ಶ ಗೃಹಿಣಿಯಾಗಿ ಬೆಳೆದು ಬಂದ ಪರಿ ಅನನ್ಯವಾದದ್ದು. ಸಾಂಪ್ರದಾಯಿಕ ಚೌಕಟ್ಟುಗಳ ಒಳಗಿದ್ದುಕೊಂಡೇ ಹೇಳಬೇಕಾದ್ದನ್ನು ದಿಟ್ಟವಾಗಿ ಹೇಳುವ ಎದೆಗಾರಿಕೆ ಹೊಂದಿದವರು. ಜನ್ಮದಿಂದ ಜಾತಿಯಲ್ಲ; ಕರ್ಮದಿಂದ ಎಂಬ ಸತ್ಯವನ್ನು ಪಾಲಿಸಿ ತೋರಿದವರು. ಸಮಾಜದಲ್ಲಿ ತಾತ್ತ್ವಿಕ ಸಮಾನತೆಗೆ ಇಂಬುಕೊಟ್ಟವರು. ತುಂಬ ಸಂಸಾರದಲ್ಲಿರುವ ಸವಿಯನ್ನು ಇತರರಿಗೂ ಹಂಚಿದವರು.


                  ಪ್ರೇಮಾ ಭಟ್‌ರ ಪತಿ ಶ್ರೀನಿವಾಸ ಭಟ್ಟರು ಉದ್ಯೋಗಿಯಾಗಿ, ಪ್ರಕಾಶಕರಾಗಿ, ಸಾಹಿತ್ಯ ಸಂಯೋಜಕರಾಗಿ, ಸಾಮಾಜಿಕ ಸಂಘಟಕರಾಗಿ ಜನಪ್ರಿಯರಾದವರು. ಅವರಿಬ್ಬರೂ ಅನುರೂಪ ದಾಂಪತ್ಯಕ್ಕೆ ಮಾದರಿಯಾಗಿ, ವಯಸ್ಸಿನ ಅಂತರ ಮರೆತು ಸ್ನೇಹ ಬೆಳೆಸುವ ರೀತಿ ಎಲ್ಲರಿಗೂ ಅನುಸರಣೀಯ. ಮಗಂದಿರು, ಸೊಸೆಯಂದಿರು, ಮೊಮ್ಮಕ್ಕಳು ಕಣ್ತುಂಬುವಂತೆ ಒಂದೇ ಮನೆಯಲ್ಲಿ ಬೆಳೆಯುತ್ತಿರುವುದನ್ನು ಕಂಡಾಗ ಅಚ್ಚರಿಯ ಜೊತೆ ಆನಂದವೂ ಆಗುತ್ತದೆ.


                  ಈಗ ೭೮ರ ಹರೆಯದಲ್ಲಿರುವ ಪ್ರೇಮಾ ಭಟ್ (ಜನನ : ೨೨.೦೯.೧೯೪೧) ಸಾಹಿತ್ಯ ಕೃಷಿಯಲ್ಲಿ ತೊಡಗಿ ೫೫ ವರ್ಷಗಳಾಗಿವೆ. ಈವರೆಗೆ ೫೫ಕ್ಕೂ ಅಧಿಕ ಕಾದಂಬರಿಗಳು, ೩ ನಗೆಬರಹಗಳು, ೧೨ ಕಥಾ ಸಂಕಲನ, ೪ ಬೃಹತ್ ಕಥಾ ಸಂಕಲನ, ೭ ವ್ಯಕ್ತಿಚಿತ್ರಣ, ೮ ಕವನ ಸಂಕಲನ, ೨ ಪ್ರವಾಸಿ ಸಾಹಿತ್ಯ, ೩ ಅನುವಾದಿತ ಕೃತಿಗಳು, ೧ ಅಂಕಣ ಬರಹ, ೧ ವಿಚಾರ ಚಿಂತನೆ - ಹೀಗೆ ಪ್ರಕಟಿತ ಕೃತಿಗಳ ಪಟ್ಟಿ ಬಹುದೊಡ್ಡದೇ ಆಗುತ್ತದೆ. ಈಗಲೂ ಲವಲವಿಕೆಯಿಂದಲೇ ಇರುವ ಪ್ರೇಮಾ ಭಟ್ ತಮ್ಮ ಸಾಹಿತ್ಯ ರಚನೆಯನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ. ಪತಿ ಶ್ರೀನಿವಾಸ ಭಟ್ಟರ ನಿಧನದ ನೋವಿನಿಂದ ಚೇತರಿಸಿಕೊಂಡು ಕನ್ನಡದ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. 


Click here for subscription



Read more Articles..

ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ ಪಯಣಿಗ ನಾನಮ್ಮ - ಜೀವನದ ಆಸ್ತಿ ನಗು, ಪ್ರೀತಿ, ಸ್ನೇಹ... ಸಂದರ್ಶನ: ಜೆ. ಕರುಣೇಶ್ ಕಡತನಾಳು ಜನ್ಮನಾಮ ನಾರಾಯಣಸ್ವಾಮಿಯಾಗಿ, ಒಂಬತ್ತನೆ ವಯಸ್ಸಿಗೆ ಬಣ್ಣದ ಬದುಕಿಗೆ ಪಾದಾರ್ಪಣೆಗೈದು, ಏ� ಸ್ತ್ರೀ ಸಮಾನತೆಯ ಹೆಸರಲ್ಲಿ ತನ್ನತನ ಮರೆಯಬಾರದು - ಪ್ರೇಮಾ ಭಟ್ ಗುರುರಾಜ ಹೊಸಕೋಟೆ : ಜನಪದ ಶೈಲಿಯ ಜಾನಪದ ಮಾಂತ್ರಿಕ


Share your thought