
ಭಾರತೋತ್ಸವ (ಸಂಚಿಕೆ- 12)
ದೇಶ ಬಹಳ ಕುತೂಹಲದಿಂದ ಕಾಯುತ್ತಿದ್ದ 2019ರ ಲೋಕಸಭಾ ಚುನಾವಣಾ ಫಲಿತಾಂಶ ಬಹುಪಾಲು ಭಾರತೀಯರಿಗೆ ಸಂತಸ ಮತ್ತು ನಿರೀಕ್ಷೆಯ ಮಳೆಯನ್ನೇ ಸುರಿಸಿದೆ.
ದೇಶವನ್ನಾಳಿದ ಪ್ರಧಾನ ಮಂತ್ರಿಗಳೆಲ್ಲರೂ ತಮ್ಮದೇ ಆದಂತಹ ವರ್ಚಸ್ಸು, ಶೈಲಿಗಳಿಂದ ಹಾಗೂ ಸಿದ್ಧಾಂತಗಳಿಂದ ದೇಶಕ್ಕೆ ಉತ್ತಮ ಆಡಳಿತ ಕೊಟ್ಟಿದ್ದಾರೆ. ಧೃಡ ನಿರ್ಧಾರ, ದಿಟ್ಟ ನಿಲುವುಗಳಿಂದ ದೇಶದ ಪ್ರಜಾ ಸಾಗರದ ನೆನಪಲ್ಲಿ ಉಳಿಯುವವರೆಂದರೆ ಮಾಜಿ ಪ್ರಧಾನ ಮಂತ್ರಿಗಳಾದ ದಿ||ಇ0ದಿರಾ ಗಾಂಧಿ ಹಾಗೂ ಹಾಲಿ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು. ಆಗಿನ ಕಾಲಘಟ್ಟದಲ್ಲಿ ಇಂದಿರಾಗಾಂಧಿಯವರ ಆಡಳಿತದ ಸಾಮಾಜಿಕ ಸುಧಾರಣೆಗಳು ಮೈಲಿಗಲ್ಲಾಗಿ ನಿಂತರೂ; ಸರ್ವಾಧಿಕಾರೀ ಧೋರಣೆ ಹಾಗೂ ಕೆಲವು ಅಸಂಬದ್ದ ನಿಲುವುಗಳಿಂದ ದೇಶವೇ ಅವರ ವಿರುದ್ಧವಾಗಿ ನಿಲ್ಲುವಂತಾಯಿತು.
ಈಗಿನ ಕಾಲಘಟ್ಟದಲ್ಲಿ ನರೇಂದ್ರ ಮೋದಿಯವರ ಆಡಳಿತ, ಕಠಿಣ ನಿಲುವುಗಳ ವೈಖರಿ, ಶಿಸ್ತುಬದ್ಧ ನಡೆ, ದೇಶದ ಏಕತೆಯ ಮಂತ್ರ `ಭಾರತೀಯ, ರಾಷ್ಟ ಹಾಗೂ ರಾಷ್ಟ್ರೀಯ’ ಎಂಬ ಭಾವ£ಗಳ ಪೋಷಣೆಗೈದು, ಯಾವ ಜಗತ್ತು ಮೋದಿಯವರನ್ನು ವಕ್ರ ದೃಷ್ಟಿಯಿಂದ ನೋಡುತ್ತಿತ್ತೋ ಆ ಜಗತ್ತೇ ಇಂದು ಅಪ್ಪಿಕೊಳ್ಳುವಂತಹ ಸನ್ನಿವೇಶ ನಿರ್ಮಾಣ ಮಾಡುವುದರಲ್ಲಿ ಯಶಸ್ವಿಯಾಗಿರುವುದಕ್ಕೆ ಚುನಾವಣಾ ಫಲಿತಾಂಶ ಸಾಕ್ಷಿಯಾಗಿದೆ.
ಶತಮಾನಗಳ ಚರಿತ್ರೆಯ ಏರು-ಪೇರುಗಳ, ಮಾನಸಿಕ ವೇದನೆಗಳಲ್ಲಿ ನೊಂದವರ, ಆಕ್ರೋಶಭರಿತ ಅಸಮಾನತೆಯ ಕಪ್ಪುಚುಕ್ಕೆಗಳಿದ್ದರೂ. ಅದರ ತಪ್ಪುಗಳನ್ನು ಒಪ್ಪಿ, ಹೊಸ ದಿಕ್ಸೂಚಿಯೊಡನೆ `ಭಾರತೀಯ, ರಾಷ್ಟ ಹಾಗೂ ರಾಷ್ಟ್ರೀಯ’ ಎಂಬ ವೇದ ವಾಕ್ಯಗಳಲ್ಲಿ ಚುನಾವಣೆ ಎದುರಿಸಿ, ಪ್ರಜೆಗಳು ತಥಾಸ್ತು ಎಂದೇಳಿ, ಮೋದೀಜಿಯವರಿಗೆ ಹಾಗೂ ಭಾರತೀಯ ಜನತಾಪಕ್ಷಕ್ಕೆ ಅಧಿಕಾರ ಕೊಟ್ಟಿರುತ್ತಾರೆ.
ಅಭಿವೃದ್ಧಿ ವಿಷಯಗಳಲ್ಲಿ ನಿರೀಕ್ಷೆಗಿಂತ ಸ್ವಲ್ಪ ಕೆಳಮಟ್ಟದಲ್ಲಿ ದೇಶವನ್ನ ಮುನ್ನೆಡೆಸಿದರೂ; ದೇಶದ ಏಕತೆ, ಸಾರ್ವಭೌಮತೆ ವಿಷಯಗಳಲ್ಲಿ ತುಂಬ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಎಂದೇಳುವುದರಲ್ಲ್ಲಿ ಎರಡು ಮಾತಿಲ್ಲ. ಮುಂದೆ ಮೋದಿ ಯಾವ ದಿಕ್ಕಿಗೆ ಕೊಂಡೊಯ್ಯುತ್ತಾರೆ ಎನ್ನುವುದು ಎಲ್ಲರ ಮುಂದಿರುವ ಪ್ರಶ್ನೆ. ಕೇವಲ ವೈಯಕ್ತಿಕ ಕೆಸರೆರಚಾಟ, ಸಿದ್ಧಾಂತಗಳಿಂದ ಯಾವುದೇ ಪಕ್ಷಗಳಿಗೆ ಲಾಭವಿಲ್ಲ. ಸಂವಿಧಾನ ಎಲ್ಲಾ ರೀತಿಯಿಂದಲೂ, ಎಲ್ಲಾ ಪ್ರಜೆಗಳಿಗೆ ರಕ್ಷಣೆ ಕೊಟ್ಟಿದೆ. ದೇಶದ ರಕ್ಷಣೆ ,ಏಕತೆಗೆ ಆದ್ಯತೆ ಕೊಟ್ಟು ಭಾರತೀಯನೆಂದು ಸಮಾಜ ಸೇವೆ ಮಾಡಿದರೆ ಮಾತ್ರ ಪ್ರಜೆಗಳ ಬೆಂಬಲವೆಂದು ಈ ಚುನಾವಣೆಯ ಫಲಿತಾಂಶದ ಸಂದೇಶ.
ಈ ಚುನಾವಣೆಯ ವಿಶೇಷತೆಯೇನೆಂದರೆ ಪ್ರಾದೇಶಿಕ ಪಕ್ಷಗಳಿಗೆ ಅಷ್ಟೇನೂ ಜನಮನ್ನಣೆ ಸಿಕ್ಕಿಲ್ಲದಿದ್ದರೂ, ಒಡಿಸ್ಸ, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳಲ್ಲಿ ಮೋದಿಯವರಿಗೆ ಆಶೀರ್ವದಿಸಿದ ರೀತಿಯಲ್ಲೇ ಪ್ರಾದೇಶಿಕ ಪಕ್ಷಗಳಿಗೆ ಜನಾಶೀರ್ವಾದ ಮಾಡಿದ್ದಾರೆ. ಉಳಿದ ರಾಜ್ಯಗಳಲ್ಲಿ ಪ್ರಾದೇಶಿಕ ಸಮಸ್ಯೆಗಳನ್ನು, ಚಿಂತನೆ, ತತ್ವಗಳು, ಸಿದ್ಧಾಂತಗಳನ್ನು ಬದಿಗೊತ್ತಿ ಮೋದಿ ಮತ್ತು ಭಾರತೀಯ ಜನತಾ ಪಕ್ಷವನ್ನು ಮತ್ತೊಮ್ಮೆ ಆಶೀರ್ವದಿಸಿದ್ದಾರೆ.
ಭಾರತೀಯ ಸಾರ್ವಭೌಮತೆಗೆ ಒತ್ತುಕೊಟ್ಟು, ಪ್ರಾದೇಶಿಕತೆಯ ಅಭಿವೃದ್ಧಿ, ಸಂಸ್ಕøತಿ, ಭಾಷೆ, ಆಚಾರ, ವಿಚಾರಗಳಿಗೆ ಮನ್ನಣೆ ನೀಡಿದರೆ ಮಾತ್ರ… ಮತ್ತೊಮ್ಮೆ… ಬಿ.ಜೆ.ಪಿಯನ್ನು ಪ್ರಜೆಗಳು ಆಶೀರ್ವದಿಸಬಹುದು. “ಆನೆ ನಡೆದಿದ್ದೇ ದಾರಿ” ಎಂಬಂತಾದರೆ ವಿರೋಧ ಪಕ್ಷಗಳಿಗಾದ ಪರಿಸ್ಥಿತಿಯೇ ಭಾಜಪಕ್ಕೆ ಬರಬಹುದು. ಮೋದಿ ಮತ್ತು ಇಂದಿರಾ ಗಾಂಧಿಯಂತಹ ಜನಪರ ನಾಯಕರುಗಳು ಎಲ್ಲಾ ಪಕ್ಷಗಳಲ್ಲಿ ಉದಯಿಸಲಿ. ವಿರೋಧÀ ಪಕ್ಷಗಳು ಸಹ ಈ ಫಲಿತಾಂಶದಿಂದ ದೃತಿಗೆಡುವಂತಿಲ್ಲ. ಸೋಲು ಗೆಲುವುಗಳು ಶಾಶ್ವತವಲ್ಲ. ಭಾರತೀಯತೆ, ಪ್ರಾದೇಶಿಕತೆ ಸಿದ್ದಾಂತಗಳನ್ನು ಅಳವಡಿಸಿಕೊಂಡು, ಉತ್ತಮವಾಗಿ ಕಾರ್ಯ ನಿರ್ವಹಿಸುವಂತಾಗಲಿ.
ಯಾರೇ ಅಧಿಕಾರ ಪಡೆಯಲಿ;ಭಾರತದ ಭೂಪಟದಲ್ಲಿ ಸದಾ ಭಾರತೋತ್ಸವ ನಡೆಯುವಂತಾಗಲಿ.
ಇಂತಿ ತಮ್ಮವ
– ಜೆ. ಕರುಣೇಶ್ ಕಡತನಾಳು
ಕುತೂಹಲ (ಸಂಚಿಕೆ- 11)
ಕುತೂಹಲ
ಜಗತ್ತು ಬದಲಾಗಿದೆ…. ಕಾಲ ಬದಲಾಗಿದೆ….. ಆದರೆ ದೇಶ ಮಾತ್ರ ಹಳೇ ಮಜಲುಗಳ ಭ್ರಮಣೆಗಳಲ್ಲಿ
ಅಭಿವೃದ್ದಿ ಪಥದೊಡನೆ ಮುನ್ನಡೆಯಲು ಯತ್ನಿಸುತ್ತಿದೆ.
ವಂಚಿತರು,ಶೋಷಿತರು,ಸಮಾಜದ ಮುಂಚೂಣಿಗೆ ಬರದವರಿಗೆ ಈಗಿನ ಜಾಗತಿಕ ತಾಂತ್ರಿಕತೆ,ಮಾಧ್ಯಮಗಳು ಕೊಡುಗೆಯಾಗಿ ಸಿಕ್ಕಿವೆ. ಆದರೆ ಕೆಲವು ವಲಯಗಳು, ರಾಜಕೀಯ ಮುಖಂಡರುಗಳು ಗತಿಸಿದ ಒಪ್ಪು-ತಪ್ಪುಗಳ ವಿಮರ್ಶೆಗಳ ಚರ್ಚೆಯಲ್ಲಿ, ಮರ ಕುಟಿಕ ಪಕ್ಷಿಯಂತೆ ಕುಟುಕಿ… ಕುಟುಕಿ…, ತಮ್ಮ ಸ್ವಾರ್ಥಕ್ಕೆ ರಾಜಕೀಯವಾಗಿಸಿ ಅಧಿಕಾರವೇರಲು ಗತಿಸಿದ ವಿಷಯಗಳನ್ನು ಆಹಾರವಾಗಿಸಿಕೊಂಡಿದ್ದಾರೆ.
ರಾಜಾಡಳಿತವಿದ್ದಾಗಲೂ ರಾಜಕೀಯ, ಸ್ವಾತಂತ್ರ್ಯ ಸಿಕ್ಕಾಗಲೂ…, ನಂತರವೂ…., ಈಗಲೂ ರಾಜಕೀಯ; ಆದರೆ ಮಜಲುಗಳು ಬೇರೆ. ಹಳೇ ಬೇರಿನ ಗತಿಸಿದ ವಿಷಯಗಳ ಪುಟ ತಿರುವಿಕೆಯನ್ನೇ ಈಗಿನ ರಾಜಕೀಯ ಅಸ್ತ್ರವಾಗಿಟ್ಟು, ಹೊಸ ಪುಟಗಳ ತಿರುವುವುದು,ಮಾತನಾಡುವುದು ದಿನ ನಿತ್ಯದ ಕೆಲಸವಾಗಿದೆ.
ತಾಂತ್ರಿಕತೆ,ಸಾಮಾಜಿಕ ಸಬಲೀಕರಣ, ಸಮಾನ ಅವಕಾಶಗಳು,ಸಂಪರ್ಕ ಸಾಧನಗಳು, ಮೇಲಾಗಿ ಮಾಧ್ಯಮ ಕೈ ಬೆರಳಿಗೆ ಸಿಕ್ಕಾಗ ದೇಶದ ಚಿಂತನೆಯೊಡನೆ ಮುನ್ನಡೆಯಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಆದರೆ ಈಗಿನ ಯುವ ಜನತೆಯನ್ನು ರಾಜಕೀಯ,ಜಾತೀಯತೆ ಮತ್ತು ಗತಿಸಿದ ಹಿಂದಿನ ತಾಲೀಮುಗಳೊಡನೆ ನಾಯಕರು ದಾರಿ ತಪ್ಪಿಸುತ್ತಿರುವುದು ಹಾಗೂ ಜೀವನ ವ್ಯರ್ಥವಾಗಿಸುತ್ತಿರುವುದು ದೇಶದ ಭವಿಷ್ಯಕ್ಕೆ ಪೆಟ್ಟು ಬಿದ್ದಂತಾಗಿದೆ.
ಇಂತಿ ತಮ್ಮವ
ಇಡೀ ದೇಶದ ಜನತೆ ಕುತೂಹಲದಿಂದ ಮೇ 23 ರ ದಿನವನ್ನು ಎದುರು ನೋಡುತ್ತಿದೆ. ಆ ದಿನದ ಫಲಿತಾಂಶ ಮುಂದಿನ ಐದು ವರ್ಷಗಳಲ್ಲಿ ರಾಜ್ಯದ,ದೇಶದ ಅಭಿವೃಧ್ದಿಗೆ ಹಾಗೂ ಹೊಸ ಮನ್ವಂತರಕ್ಕೆ ಎಡೆ ಮಾಡಿಕೊಡಲಿ. ತೆರೆಮರೆಯಲ್ಲಿರುವ ಪ್ರಜ್ಞಾವಂತ ಸಮರ್ಥ ಹೊಸ ನಾಯಕರುಗಳು ಉದಯಿಸಲಿ. ಆಡಳಿತ ಪಕ್ಷವಾಗಲೀ,ವಿರೋಧಪಕ್ಷವಾಗಲೀ ಸಮರ್ಥವಾಗಿ ಕಾರ್ಯ ನಿರ್ವಹಿಸುವಂತಾಗಲಿ.
ಇಂತಿ ತಮ್ಮವ
– ಜೆ. ಕರುಣೇಶ್ ಕಡತನಾಳು
15-May-2019
—ನಿಟ್ಟುಸಿರು —-
ಎಂದೂ ಕಾಣದಂತಹ ಲೋಕಸಭಾ ಚುನಾವಣೆಗಳು ರಾಜ್ಯದಲ್ಲಿ ಮುಗಿದಿವೆ. ಪ್ರತಿಯೊಬ್ಬ ಮತದಾರರೂ ತನ್ನ ಹಕ್ಕು ಚಲಾಯಿಸಿ, ನಿಟ್ಟುಸಿರು ಬಿಟ್ಟು, ಮುಂದಿನ ದೈನಂದಿನ ಬದುಕಿನ ಯೋಚನೆಯಲ್ಲಿ ತಲ್ಲೀನರಾಗಿದ್ದಾರೆ. ಪ್ರತಿಯೊಬ್ಬ ಆಯಾ ಪಕ್ಷದ ಕಾರ್ಯಕರ್ತರಲ್ಲಿ ಅವರದೇ ಆದಂತಹ ಥಿಯರಿ ಮತ್ತು ಪ್ರಾಕ್ಟಿಕಲ್ ಚುನಾವಣಾ ಗೆಲುವು-ಸೋಲುಗಳ ಲೆಕ್ಕಾಚಾರಗಳು ಹರಿದಾಡುತ್ತಿವೆ. ಮೇ 23 ರಂದು ನಮ್ಮ ರಾಜ್ಯದಲ್ಲಿ ರಾಜಕೀಯ ಫಲಿತಾಂಶ ಏನಾಗಬಹುದು? ಮುಂದಿನ ದಿನಗಳಲ್ಲಿ ಮತ್ತೆ ರಾಜಕೀಯ ದೊಂಬರಾಟ ಪ್ರಾರಂಭವಾಗುವುದೇ? ಎಂಬ ಕುತೂಹಲ ಪ್ರತಿಯೊಬ್ಬ ಪ್ರಜೆಗಳಲ್ಲಿ ಮನೆಮಾಡಿದೆ.
ರಾಜಕೀಯವು ಸಾಮಾಜಿಕ ಬದುಕಿನ ಅವಿಭಾಜ್ಯ ಅಂಗವೂ ಆಗಿದೆ ಎಂಬುದು ನಿಜ. ಆದರೆ ಕೆಲ ದಶಕಗಳಿಂದ ನಮ್ಮ ರಾಜಕೀಯ ನಾಯಕರು ಸಾಗುತ್ತಿರುವ ಪರಿ ನಿಜಕ್ಕೂ ದೇಶಕ್ಕೆ, ರಾಜ್ಯಕ್ಕೆ, ಸಾಮಾಜಿಕ ಬದುಕಿಗೆ ಒಂದು ಮಾರಕ ರೋಗದಂತೆ ಪರಿಣಮಿಸಿದೆ. ದೇಶದಲ್ಲೂ ಮತ್ತು ರಾಜ್ಯದಲ್ಲೂ ರಾಜಕೀಯ ಅಸ್ಥಿರತೆ ನಿಜಕ್ಕೂ ದೇಶದ ಪ್ರಗತಿಗೆ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ. ಸ್ಥಿರತೆಯ ಸರ್ಕಾರಗಳು ಬಂದುವು ಎಂದು ಕಂಡು ಬಂದರೂ, ಅವು ಮುಂದೆಯೂ ಸ್ಥಿರವಾಗಿ ನಿಲ್ಲುವ ಸೂಚನೆಗಳಿಲ್ಲ.
ಮೊಬೈಲ್ ಹೇಗೆ ನಮ್ಮ ಜೀವನದ ಮೌಲ್ಯಗಳನ್ನು ಕಿತ್ತುಕೊಂಡಿದೆಯೋ ಹಾಗೆಯೇ ರಾಜಕೀಯವು ಪ್ರಜಾ ಮೌಲ್ಯಗಳನ್ನು ಅಳಿಸಿಹಾಕಿದೆ. ರಾಜಕೀಯವೇ ಒಂದು ವರ್ಣರಂಜಿತ, ನಾಟಕೀಯ ಮಂಡಳಿಗಳ ರೀತಿ ಮಾರ್ಪಟ್ಟಿದೆ . ಪ್ರಜೆಗಳು ಅದರ ಕಾಲ್ತುಳಿತಕ್ಕೆ ಸಿಕ್ಕಿ ನಲುಗುತ್ತಿರುವುದು, ತಾತ್ಕಾಲಿಕ ಲಾಭಕ್ಕೆ ಮೊರೆ ಹೋಗಿರುವುದು ವಿಷಾದನೀಯ ಸಂಗತಿ.
ಪ್ರಜ್ಞಾವಂತ ಮತದಾರರು ಕೇವಲ ಮತದಾನದ ವೇಳೆ ಮಾತ್ರ ಈ ಕುರಿತು ಚಿಂತಿಸಿದರೆ ಸಾಲದು ತಾವು ಆಯ್ಕೆ ಮಾಡಿದ ನಾಯಕರ ಹಾಗೂ ಪಕ್ಷಗಳ ಎಲ್ಲಾ ನಡೆಗಳನ್ನು ಸದಾಕಾಲವೂ ಗಮನಿಸವ ಪರಿಪಾಠವನ್ನು ಕೊಳ್ಳುವುದು ಸೂಕ್ತ.
ಇಂತಿ ತಮ್ಮವ
– ಜೆ. ಕರುಣೇಶ್ ಕಡತನಾಳು
01-May-2019